ಎಟಿಎಂನಲ್ಲಿ ನೂರು ರೂ ನೋಟಿಲ್ಲ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಬ್ಯಾಂಕಿನಲ್ಲಿ ಜಮಾ ಮಾಡಿಟ್ಟಿದ್ದ ಹಣವನ್ನು ಮರಳಿ ಪಡೆಯಲು ಎಟಿಎಂಗಳನ್ನೇ ಅವಲಂಬಿಸಿದ್ದಾರೆ. ಆದರೆ ಎಟಿಎಂಗಳಲ್ಲಿ ಕರೆನ್ಸಿ ನೋಟುಗಳ ಕೊರತೆ ಇದೆ. ಒಂದು ಎಟಿಎಂನಲ್ಲಿ ಎರಡು ಸಾವಿರದ ನೋಟು, ಮತ್ತೊಂದು ಕಡೆ ಐನೂರರ ನೋಟುಗಳು ಮಾತ್ರ ಇರುತ್ತದೆ. ಒಬ್ಬ ವ್ಯಕ್ತಿಗೆ ಮುನ್ನೂರು ರೂಪಾಯಿ ಮಾತ್ರ ಬೇಕಾಗಿರುತ್ತದೆ. ಆದರೆ ಎಟಿಎಂನಲ್ಲಿ ಚಿಲ್ಲರೆ ನೋಟುಗಳು ಇರುವುದಿಲ್ಲ. ಈ ಸಮಸ್ಯೆಯಿಂದ ಜನರು ಎಟಿಎಂಗಳಿಂದ ತಮ್ಮ ಹಣವನ್ನು ಹಿಂಪಡೆಯಲು ಅಲೆದಾಡುತ್ತಿದ್ದಾರೆ. ಆದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಟಿಎಂಗಳಲ್ಲಿ ಚಿಲ್ಲರೆ ನೂರರ ಕರೆನ್ಸಿಗಳನ್ನು ಹಾಕಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಉಪಕಾರವಾದೀತು

  • ಕೆ ವಾಸುದೇವ ಭಟ್  ಸಾಸ್ತಾನ