ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ : ಶ್ರೀರಾಮ ರೆಡ್ಡಿ

ಭಟ್ಕಳದಲ್ಲಿ ಸಾಮರಸ್ಯಕ್ಕಾಗಿ ಸೌಹಾರ್ದ ಕರ್ನಾಟಕ ಸಮಾವೇಶ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : “ದೇಶದಲ್ಲಿ ಪ್ರಸ್ತುತ ಭಯದ ವಾತಾವರಣ ಸೃಷ್ಟಿಯಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಳುವ ಸರಕಾರ ಮತ್ತು ಅದರ ಪ್ರತಿನಿಧಿಗಳ ವಿರುದ್ಧ ಮಾತನಾಡುವುದೇ ಕಷ್ಟವಾಗಿದೆ. ದೇಶವನ್ನು ಆಳುವ ಮಂದಿ ಹಿಟ್ಲರ್ ಶಾಹಿ, ಪ್ಯಾಶಿಸ್ಟ್ ಸ್ವರೂಪ ತೋರಿಸುತ್ತಿರುವುದರಿಂದ ಭಾರತ ಪರಿಕಲ್ಪನೆಯೇ ನಾಶವಾಗುತ್ತಿದೆ” ಎಂದು ಬಾಗೇಪಲ್ಲಿ ಮಾಜಿ ಶಾಸಕ ಹಾಗೂ ರೈತಪರ ಹೋರಾಟಗಾರ ಜಿ ವಿ ಶ್ರೀರಾಮ ರೆಡ್ಡಿ ಹೇಳಿದರು.

ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಶಾಂತಿ ಸಹಬಾಳ್ವೆ, ಸಾಮರಸ್ಯಕ್ಕಾಗಿ ಸೌಹಾರ್ದ ಕರ್ನಾಟಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಭಾರತ ದೇಶ ವಿಭಿನ್ನ ಧರ್ಮ, ಭಾಷೆ, ಸಂಸ್ಕøತಿ ಹೊಂದಿದ ದೇಶವಾಗಿದೆ. ದೇಶದಲ್ಲಿ ಆಸ್ತಿಕರು ಮತ್ತು ನಾಸ್ತಿಕರೂ ಎರಡೂ ವರ್ಗದವರೂ ಇದ್ದಾರೆ. ಈ ದೇಶವನ್ನು ಯಾವುದೋ ಒಂದು ಧರ್ಮದವರು ಕಟ್ಟಿ ಬೆಳೆಸಿಲ್ಲ. ಬದಲಾಗಿ ಎಲ್ಲಾ ಜಾತಿ, ಜನಾಂಗ, ಧರ್ಮದವರು ಕಟ್ಟಿ ಬೆಳೆಸಿದ್ದಾರೆ. ಭಾರತ ವಿಶ್ವದಲ್ಲಿ ತನ್ನದೇ ಆದ ಮಹತ್ವ, ಶಕ್ತಿಯನ್ನು ಹೊಂದಿರುವ ರಾಷ್ಟ್ರವಾಗಿದೆ. ಭಾರತವನ್ನು ಒಡೆಯಲು ಮತ್ತು ಧರ್ಮದ ಮೂಲಕ ರಾಜಕಾರಣ ಮಾಡಲು ಕೋಮುವಾಗಿ ಶಕ್ತಿಗಳು ಹವಣಿಸುತ್ತಿವೆ. 2014ರ ಲೋಕಸಭಾ ಚುನಾವಣೆ ನಂತರದಲ್ಲಿ ದೇಶದಲ್ಲಿ ಆತಂಕ, ಭಯದ ವಾತಾವರಣ ಶುರುವಾಗಿದೆ. ಎಲ್ಲೆಲ್ಲೂ ಆರ್ಥಿಕ ಮತ್ತಿತರ ಅಸಮಾನತೆ ಹೆಚ್ಚುತ್ತಿದೆ. ಸರಕಾರದ ಆರ್ಥಿಕ ನೀತಿಗಳು ಬಡವರಿಗಿಂತ ದೊಡ್ಡವರಿಗೆ ಅನುಕೂಲ ತಂದಿದೆ” ಎಂದ ಅವರು, “ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆಳುವವರನ್ನು ಟೀಕಿಸಿದರೆಂದ ಮಾತ್ರಕ್ಕೆ ಅವರ ಮೇಲೆ ವಿರೋಧ, ಹಲ್ಲೆ ಮಾಡುವ ಸಂಸ್ಕøತಿ ಸರಿಯಲ್ಲ. ಭಯಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಸೌಹಾರ್ದ ಕರ್ನಾಟಕ ಅಕ್ಟೋಬರ್ 30ರಂದು ರಾಜ್ಯಾದ್ಯಂತ ಮಾನವ ಸರಪಳಿಯನ್ನು ನಡೆಸಲು ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿದ್ದು ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕಾಗಿ ನವಕರ್ನಾಟಕ ನಿರ್ಮಾಣವೊಂದೆ ದಾರಿಯಾಗಿದೆ. ಭಟ್ಕಳದಲ್ಲೂ ಸಹ ಶಾಂತಿ ಸೌಹಾರ್ದತೆ ಸದಾ ನೆಲೆಸಬೇಕಿದೆ” ಎಂದರು.

ಉತ್ತರ ಕನ್ನಡ ಜಿಲ್ಲಾ ರೈತ ಮುಖಂಡ ಶಾಂತರಾಮ ನಾಯಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಶಿರಾಲಿ ಜನತಾ ವಿದ್ಯಾಲಯ ಪ್ರಾಂಶುಪಾಲ ಅಮೃತ್ ಬಿ ರಾಮರಥ್ ಮಾತನಾಡಿ, “ದೇಶ ಹಾಗೂ ರಾಜ್ಯವನ್ನು ಅರಾಜಕತೆಗೆ ತಳ್ಳುವ ಗುಂಪು ಇಲ್ಲಿ ಸಕ್ರಿಯವಾಗಿದ್ದು, ತಮ್ಮ ಮಕ್ಕಳನ್ನು ಅಂತಹವರಿಂದ ದೂರವಿಡಬೇಕು. ರಾಜ್ಯದಲ್ಲಿ ವೈಚಾರಿಕತೆ ಹತ್ಯೆಯಾಗುತ್ತಿದ್ದು ಇದು ಖಂಡನೀಯ” ಎಂದರು.

ಪತ್ರಕರ್ತ ಎಂ ಆರ್ ಮಾನ್ವಿ, ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ, ತಂಝೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಯಮುನಾ ಗಾಂವ್ಕರ್ ಮಾತನಾಡಿದರು. ಸಮಾವೇಶದಲ್ಲಿ ವಿವಿಧ ಸಂಘಟನೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಹಲ್ಲೆ ಮಾಡುವ ಸಂಸ್ಕøತಿ ಸರಿಯಲ್ಲ. ಭಯಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಸೌಹಾರ್ದ ಕರ್ನಾಟಕ ಅಕ್ಟೋಬರ್ 30ರಂದು ರಾಜ್ಯಾದ್ಯಂತ ಮಾನವ ಸರಪಳಿಯನ್ನು ನಡೆಸಲು ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿದ್ದು ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕಾಗಿ ನವಕರ್ನಾಟಕ ನಿರ್ಮಾಣವೊಂದೆ ದಾರಿಯಾಗಿದೆ. ಭಟ್ಕಳದಲ್ಲೂ ಸಹ ಶಾಂತಿ ಸೌಹಾರ್ದತೆ ಸದಾ ನೆಲೆಸಬೇಕಿದೆ” ಎಂದರು.ಉತ್ತರ ಕನ್ನಡ ಜಿಲ್ಲಾ ರೈತ ಮುಖಂಡ ಶಾಂತರಾಮ ನಾಯಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಶಿರಾಲಿ ಜನತಾ ವಿದ್ಯಾಲಯ ಪ್ರಾಂಶುಪಾಲ ಅಮೃತ್ ಬಿ ರಾಮರಥ್ ಮಾತನಾಡಿ, “ದೇಶ ಹಾಗೂ ರಾಜ್ಯವನ್ನು ಅರಾಜಕತೆಗೆ ತಳ್ಳುವ ಗುಂಪು ಇಲ್ಲಿ ಸಕ್ರಿಯವಾಗಿದ್ದು, ತಮ್ಮ ಮಕ್ಕಳನ್ನು ಅಂತಹವರಿಂದ ದೂರವಿಡಬೇಕು. ರಾಜ್ಯದಲ್ಲಿ ವೈಚಾರಿಕತೆ ಹತ್ಯೆಯಾಗುತ್ತಿದ್ದು ಇದು ಖಂಡನೀಯ” ಎಂದರು.

ಪತ್ರಕರ್ತ ಎಂ ಆರ್ ಮಾನ್ವಿ, ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ, ತಂಝೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಯಮುನಾ ಗಾಂವ್ಕರ್ ಮಾತನಾಡಿದರು. ಸಮಾವೇಶದಲ್ಲಿ ವಿವಿಧ ಸಂಘಟನೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಅನ್ಯ ಧರ್ಮದವರ

ಕೊಲೆ ನಿಮಗೆ ಕಾಣಿಸುತ್ತಿಲ್ಲವೇ ?

“ಇತ್ತೀಚೆಗಷ್ಟೇ ಉತ್ತರ ಕನ್ನಡ ಜಿಲ್ಲೆಯಿಂದ ಕೇಂದ್ರ ಸಚಿವರಾದವರು ರಾಜ್ಯದಲ್ಲಿ ಹಿಂದೂಗಳ ಕೊಲೆಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಅವರಿಗೆ ಬೇರೆ ಧರ್ಮದವರು ಕೊಲೆಯಾಗುತ್ತಿರುವುದು ಕಾಣಿಸುವುದಿಲ್ಲವೇ” ಎಂದು ಮಾಜಿ ಶಾಸಕ ಶ್ರೀರಾಮ ರೆಡ್ಡಿ ಪ್ರಶ್ನಿಸಿದರು. “ಕೇಂದ್ರ ಸಚಿವರು ಜವಾಬ್ದಾರಿಯಿಂದ ವರ್ತಿಸಬೇಕಿದೆ. ಇವರು ಕೇವಲ ಹಿಂದೂಗಳ ಪ್ರತಿನಿಧಿಯೋ ಅಥವಾ ಭಾರತ ದೇಶದ ಪ್ರತಿನಿಧಿಯೋ” ಎಂದು ಪ್ರಶ್ನಿಸಿದ ಅವರು, “ಹಿಂದೂಗಳ ಕೊಲೆ ಎಂದು ಬೊಬ್ಬೆ ಹೊಡೆಯುವ ಸಚಿವರು ಮಂಗಳೂರಿನಲ್ಲಿ ನಡೆದ ಮಹೇಶ ಪೂಜಾರಿ, ಹರೀಶ ಪೂಜಾರಿ ಹಾಗೂ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಇವರೆಲ್ಲರೂ ಹಿಂದೂ ಸಮಾಜದವರಲ್ಲವೇ ? ಇವರನ್ನು ಕೊಂದವರು ಯಾರು ಎಂದು ಸ್ಪಷ್ಟಪಡಿಸಬೇಕು” ಎಂದು ಹೇಳಿದರು.

 

LEAVE A REPLY