ಎಟಿಎಂ ಸ್ಥಿತಿ ಸುಧಾರಿಸಿಲ್ಲ

ಕೇಂದ್ರ ಸರಕಾರ ನೋಟು ರದ್ಧತಿ ಕ್ರಮ ಕೈಗೊಂಡು ಇಷ್ಟು ದಿನಗಳಾದ ಬಳಿಕವೂ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತೆಗೆಯಲು ಏನಿಲ್ಲವೆಂದರೂ ನಾಲ್ಕೈದು ಎಟಿಎಂಗಳಿಗೆ ಅಲೆಯಬೇಕಾದ ಸ್ಥಿತಿ ಇದೆ
ಕೆಲವು ಎಟಿಎಂಗಳ ಬಾಗಿಲಿಗೆ  ನೋ ಬ್ಯಾಲೆನ್ಸ್ ಬೋರ್ಡ್ ಹಾಕಲಾಗಿದ್ದರೆ  ಇನ್ನು ಕೆಲವು ಕಡೆ ಭದ್ರತಾ ಸೇವಕರು  ಕ್ಯಾಶ್ ಇಲ್ಲ  ಎಂದು ಹೇಳಿ ವಾಪಾಸು ಕಳುಹಿಸುತ್ತಾರೆ. ಒಂದು ವೇಳೆ ಎಟಿಎಂ ಯಂತ್ರದಲ್ಲಿ ಹಣ ಇದ್ದರೂ ಅಲ್ಲಿ ಸಿಗುವುದು ರೂಪಾಯಿ 2000 ಮುಖಬೆಲೆಯ ನೋಟುಗಳು ಮಾತ್ರ. ಹಣ ಇರುವ ಒಂದೆರಡು ಎಟಿಎಂಗಳ ಮುಂದೆ ಉದ್ದನೆಯ ಸಾಲು
ಈ ನಾಲ್ಕೂವರೆ ತಿಂಗಳಿನಲ್ಲಿ ಸಾಮಾಜಿಕವಾಗಿ ಜನ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ. ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಇಲಾಖೆ ಸೂಕ್ತ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಬೇಕು

  • ರಮಾನಂದ ಚೌಟ  ಮುಳಿಹಿತ್ಲು ಮಂಗಳೂರು