ಎಟಿಎಂ ಪಿನ್ ನಂಬರ್ ಪಡೆದು ಅಪರಿಚಿತನಿಂದ ಉದ್ಯೋಗಿಗೆ ವಂಚನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಬಿಣಗಾ ಫ್ಯಾಕ್ಟ್ರಿ ಉದ್ಯೋಗಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಎಟಿಎಂ ಪಿನ್ ನಂಬರ್ ಪಡೆದು ಸಾವಿರಾರು ರೂ ಹಣ ಡ್ರಾ ಮಾಡಿ ವಂಚಿಸಿದ ಪ್ರಕರಣ ಮಂಗಳವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಿಣಗಾ ನಿವಾಸಿ ವಿನೋದ ಎಸ್ ಪ್ರಭು ವಂಚನೆಗೊಳಗಾದವರು. ಇವರ ಸಿಂಡಿಕೇಟ್ ಬ್ಯಾಂಕಿನ ಎಟಿಎಂನ ಅವಧಿ ಮುಗಿದು ಹೋಗಿದೆ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ಅವರಿಂದ ಎಟಿಎಂನ ಸಿಕ್ರೇಟ್ ಪಿನ್ ಕೋಡ್ ಪಡೆದು ಖಾತೆಯಲ್ಲಿದ್ದ 22,900 ರೂ ನಗದನ್ನು ಡ್ರಾ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ವಿನೋದ ಎಸ್ ಪ್ರಭು ಅವರು ವಂಚನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.