ಕಾರಿನಿಂದ ಎಟಿಎಂ ಕಾರ್ಡ್ ಪಹರಿಸಿ ಹಣ ಕಳವು

   ಸೀಸಿ ಟೀವಿಯಲ್ಲಿ ದೃಶ್ಯ ಸೆರೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಸೀಸಿ ಟೀವಿಯಲ್ಲಿ ದೃಶ್ಯ ಸೆರೆಯಾದ ಹಿನ್ನೆಲೆಯಲ್ಲಿ ವ್ಯಕಿಯೊಬ್ಬ ಎಟಿಎಂನಿಂದ ಹಣ ಕಳವುಗೈದ ಪ್ರಕರಣ ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿದೆ.

ಧರ್ಮಸ್ಥಳದಲ್ಲಿ ಎ 4ರಂದು ವ್ಯಕ್ತಿಯೊಬ್ಬ ಬೆಳಿಗ್ಗೆ ವಸತಿಗೃಹದ ಬಳಿ ನಿಲ್ಲಿಸಿದ್ದ ಸೋಮವಾರಪೇಟೆ ತಾಲೂಕು ಶಿರಂಗಾಲದ ಯತಿರಾಜ್ ಎಂಬವರ ಕಾರಿನಿಂದ ಎಟಿಎಂ ಕಾರ್ಡ್ ಅಪಹರಿಸಿ ಸನಿಹದ ವಿಜಯಾ ಬ್ಯಾಂಕ್ ಎಟಿಎಂನಿಂದ 10 ಸಾವಿರ ರೂ, ಕರ್ನಾಟಕ ಬ್ಯಾಂಕ್ ಎಟಿಎಂನಿಂದ 5 ಸಾವಿರ ರೂ, ಕಾರ್ಪೊರೇಶನ್ ಬ್ಯಾಂಕ್ ಎಟಿಎಂನಿಂದ 10 ಸಾವಿರ ರೂ ಅಪಹರಿಸಿದ್ದು ಎಲ್ಲಾ ದ್ಯಶ್ಯಾವಳಿ ಸೀಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಆಧಾರದಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.