ಜ್ಯೋತಿಷಿ ಕೊಲೆ ಯತ್ನ : ಕಾರು ವಶಕ್ಕೆ, ಆರೋಪಿಯ ಗುರುತು ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅಣಂಗೂರು ಪರಿಸರವಾಸಿ ಜ್ಯೋತಿಷಿ(30)ಯನ್ನು ಕೊಲೆಗೈಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ತನಿಖೆಯನ್ನು ಊರ್ಜಿತಗೊಳಿಸಿದ್ದಾರೆ.

ಈ ಪ್ರಕರಣದ ಒಬ್ಬ ಆರೋಪಿಯ ಗುರುತು ಪತ್ತೆ ಹಚ್ಚಿರುವ ಬಗ್ಗೆ ಮಾಹಿತಿ ಲಭಿಸಿದೆ. ಆತನ ಪತ್ತೆಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ. ಅರೋಪಿಗಳು ಸಂಚರಿಸಿದರೆನ್ನಲಾಗುತ್ತಿರುವ ಕಾರೊಂದನ್ನು ಬಟ್ಟುಹೋದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಪೆÇಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಎರಡು ದಿನದ ಹಿಂದೆ ಕೋಟಕಣಿ ಎಂಬಲ್ಲಿ ಜ್ಯೋತಿಷಿಯ ಮೇಲೆ ಹಲ್ಲೆ ನಡೆದಿದೆ. ಜ್ಯೋತಿಷಿಯ ಬೊಬ್ಬೆ ಕೇಳಿ ಸ್ಥಳೀಯರು ಬರುವಷ್ಟರಲ್ಲಿ ಸ್ಥಳೀಯರು ಪರಾರಿಯಾಗಿದ್ದಾರೆ.