ಶಸ್ತ್ರಚಿಕಿತ್ಸೆಗೊಳಗಾದ ಜ್ಯೋತಿಷಿ ಮೃತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಶಸ್ತ್ರ ಚಿಕಿತ್ಸೆಗೊಳಗಾದ ಜ್ಯೋತಿಷಿ ವಿಶ್ರಾಂತಿ ವೇಳೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತÀಪಟ್ಟಿದ್ದಾರೆ.

ಬೇಂಗತ್ತಡ್ಕ ಭಜನಾ ಮಂದಿರ ಸಮೀಪವಾಸಿ ಪುರುಷೋತ್ತಮ ಎಂಬವರ ಪುತ್ರ ವೇಣು (30) ಎಂಬವರು ಮೃತ ದುರ್ದೈವಿ. ವೇಣುರಿಗೆ ಜ್ವರ ಕಾಣಿಸಿಕೊಂಡಿದ್ದು ಕೂಡಲೇ ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿಯಾದರು. ತಪಾಸಣೆ ವೇಳೆ ವೇಣು ಅವರ ಬೆನ್ನಿನಲ್ಲಿ ಹುಣ್ಣು ಕಾಣಿಸಿಕೊಂಡಿದ್ದು ಜ್ವರಕ್ಕೆ ಇದು ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಶಸ್ತ್ರಚಿಕಿತ್ಸೆ ನಡೆಸಿ ತೆರವುಗೊಳಿಸಬೇಕೆಂದು ವೈದ್ಯರು ತಿಳಿಸಿದ್ದರು. ಇದರಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿ ವಿಶ್ರಾಂತಿಯಲ್ಲಿದ್ದ ವೇಣುವಿಗೆ ರಾತ್ರಿ ಅಸೌಖ್ಯ ಕಾಣಿಸಿಕೊಂಡಿದ್ದು, ವೈದ್ಯರು ಬಂದು ತಪಾಸಣೆ ನಡೆಸುವಷ್ಟರಲ್ಲಿ ಹೃದಯಾಘಾತವುಂಟಾಗಿ ವೇಣು ಮೃತರಾಗಿರುವುದಾಗಿ ತಿಳಿಸಲಾಗಿದೆ.