ಅಷ್ಟಮಿ ರಾತ್ರಿ ಮನೆಗೆ ಕನ್ನ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಷ್ಟಮಿ ಪೂಜೆ ಮುಗಿಸಿ ಮನೆಯೊಳಗೆ ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದು ನೋಡಿದಾಗ ಮನೆಯೊಳಗೆ ಕಳವು ಕೃತ್ಯ ನಡೆದದ್ದು ಬೆಳಕಿಗೆ ಬಂದಿದೆ. ಇಡ್ಯಾ ಗ್ರಾಮದ ಭರತ್ ನಗರ ಎಂಬಲ್ಲಿನ ನಿವಾಸಿ ರಾಜಶೇಖರ್ ಭಟ್ ಮನೆಯಲ್ಲಿ ಈ ಕಳವು ನಡೆದಿದೆ. ಸುಮಾರು ಮಧ್ಯರಾತ್ರಿಯವರೆಗೂ ಎಚ್ಚರವಾಗೇ ಇದ್ದ ಭಟ್ ರಾತ್ರಿ ಕೃಷ್ಣ ಜನ್ಮಾಷ್ಟಮಿ ಪೂಜೆ ಮುಗಿಸಿ ಮಲಗಿದ್ದರು. ಆದರೆ ಬೆಳಿಗ್ಗೆ ನೋಡುವಾಗ ಸುಮಾರು 74 ಗ್ರಾಂ ತೂಕದ ಚಿನ್ನಾಭರಣ ಅಂದಾಜು ಮೌಲ್ಯ ರೂ 1,85,000 ಮತ್ತು ನಗದು ರೂ 7500ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ 1,92,500 ಎನ್ನಲಾಗಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.