ಮೇ 2ನೇ ವಾರದಲ್ಲಿ ಅಸೆಂಬ್ಲಿ ಚುನಾವಣೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಅಸೆಂಬ್ಲಿ ನಡೆಸಲೋಸುಗ ಭಾರತ ಚುನಾವಣಾ ಆಯೋಗ ನಿನ್ನೆ ಕರೆದಿದ್ದ ಎರಡು ದಿನಗಳ ಸಭೆ ಮೇ ತಿಂಗಳ ಎರಡನೇ ವಾರದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ.

ಚುನಾವಣೆಯಲ್ಲಿ ನಗದು, ಮದ್ಯ ಮತ್ತು ಇತರ ಪ್ರಭಾವ ತಡೆಗಟ್ಟುವ ವಿಷಯದಲ್ಲೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ದೆಸೆಯಲ್ಲಿ ಆದಾಯ ತೆರಿಗೆ ಇಲಾಖೆ ಈಗಾಗಲೇ ಕಾರ್ಯತತ್ಪರವಾಗಿದೆ. ಅಭ್ಯರ್ಥಿಗಳ ಅವ್ಯವಹಾರ ಮತ್ತು ಇತರ ಖರ್ಚು ವೆಚ್ಚಗಳತ್ತ ನಿಗಾ ಇರಿಸಲು ಮೇಲ್ವಿಚಾರಣಾ ತಂಡಗಳನ್ನು ರಚಿಸಬೇಕೆಂದು ಚುನಾವಣಾ ಆಯೋಗ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದೆ.

LEAVE A REPLY