ಹಲ್ಲೆ ಆರೋಪಿ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ವೈದ್ಯ ಮತ್ತು ಅವರ ಸಂಬಂಧಿ ಮಹಿಳೆಗೆ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಶ್ರೀ ಕೃಷ್ಣಮಠದ ರಥಬೀದಿಯಲ್ಲಿರುವ ಶ್ರೀ ಕೃಷ್ಣಸಭಾ ಭವನದಲ್ಲಿ ವೈದ್ಯ ಶರತಚಂದ್ರ ಮತ್ತು ಅವರ ಸಂಬಂಧಿ ಮಲ್ಪೆ-ಆಶೀರ್ವಾದ್ ರಸ್ತೆಯ ಕೃಷ್ಣಾರ್ಜುನ ಮನೆ ನಿವಾಸಿ ಶಶಿಕಲಾ ಎಂಬವರಿಗೆ ಆರೋಪಿ ಮಧುಸೂದನ್ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ ಪರಿಣಾಮ ಶಶಿಕಲಾ ನೋವಿನಿಂದ ಪ್ರಜ್ಞೆ ತಪ್ಪಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಶಶಿಕಲಾ ನೀಡಿದ ದೂರಿನಂತೆ ಆರೋಪಿ ಮಧುಸೂದನ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.