ಮಳಲಿ ಮಟ್ಟಿ ರಸ್ತೆ ಡಾಮರೀಕರಣಗೊಳಿಸಿ

ಗುರುಪುರ ಕೈಕಂಬದಿಂದ ಮಟ್ಟಿ ಮುಖಾಂತರ ಮಳಲಿ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ಬಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ. ಈ ರಸ್ತೆ ಎರಡೂ ಬದಿಗಳಲ್ಲಿ ನೀರು ಹೋಗುವ ಚರಂಡಿ ಸರಿಯಿಲ್ಲದೇ ಮಳೆ ನೀರು ರಸ್ತೆಯಲ್ಲಿಯೇ ನಿಂತು ರಸ್ತೆ ಪೂರಾ ಹಾಳಾಗಿದೆ. ಈ ಬಗ್ಗೆ ಜಿ ಪಂ ತಾ ಪಂ.ಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಬೇಸಿಗೆಯಲ್ಲಿಯೇ ಈ ರಸ್ತೆ ಕೆಟ್ಟು ಹೋಗಿತ್ತು. ಆಗಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಡಾಮರೀಕರಣ ಮಾಡಿದ್ದರೆ ರಸ್ತೆ ಸುಸ್ಥಿತಿಯಲ್ಲಿರುತ್ತಿತ್ತು. ಸ್ಥಳೀಯ ಜನಪ್ರತಿನಿಧಿಗಳಿಗೂ ಇಚ್ಛಾಶಕ್ತಿ ಕೊರತೆ ಇರಬೇಕು. ಡಾಮರೀಕರಣದಂಥ ಬೇಸಿಗೆಯಲ್ಲಿ ಮಾಡುವ ಕೆಲಸವನ್ನು ಮಳೆಗಾಲದಲ್ಲಿ ಮಾಡಲು ಸಾಧ್ಯವೇ ಕಳೆದ ಸಲನೂ ಈ ರಸ್ತೆ ದುಃಸ್ಥಿತಿ ಹೀಗೆಯೇ ಇದೇ ಈ ಬಾರಿಯೂ ಭಿನ್ನವಾಗಿಲ್ಲ. ಹೊಂಡ ಬಿದ್ದ ಕಡೆ ತೇಪೆ ಹಾಕಿ ಏನೂ ಪ್ರಯೋಜನವಿಲ್ಲ. ಈ ರಸ್ತೆಗೆ ಫೇವರ್ ಫಿನಿಶಿಂಗ್ ಡಾಮರೀಕರಣ ಮಾಡಲಿ

  • ನಾರಾಯಣ ಸಫಲಿಗ  ಕೈಕಂಬ