ರಾಷ್ಟ್ರಚಿಹ್ನೆ ಬಿಡಿಸಿದ ಕಲಾವಿದ ನಿಧನ

ದೀನನಾಥ ಭಾರ್ಗವ

ಇಂದೋರ್/ಕೋಲ್ಕತ್ತ : ತನ್ನ 21ನೇ ವಯಸ್ಸಿನಲ್ಲಿ ರಾಷ್ಟ್ರಚಿಹ್ನೆ `ಅಶೋಕ’ ನಕ್ಷೆ ಬಿಡಿಸಿರುವ ಅದ್ಭುತ ಕಲಾವಿದ ದೀನನಾಥ ಭಾರ್ಗವ (89) ನಿನ್ನೆ ಇಂದೋರಿನ ಆನಂದ ನಗರದ ಸ್ವನಿವಾಸದಲ್ಲಿ ಶನಿವಾರ ನಿಧನ ಹೊಂದಿದರು.

ಪತ್ನಿಯೊಂದಿಗೆ ಕುಳಿತು ಮಾತನಾಡುತ್ತಿದ್ದಾಗ ಕುಸಿದ ಭಾರ್ಗವ ಕೊನೆಯುಸಿರೆಳೆದಿದ್ದಾರೆಂದು ಕುಟುಂಬ ಮೂಲಗಳು ಹೇಳಿವೆ.

ಭಾರ್ಗವ ಕುಸಿದು ಬಿದ್ದ ವಿಷಯ ತಿಳಿದು ತಾನು ತಕ್ಷಣ ಅಂಬುಲೆನ್ಸಿನೊಂದಿಗೆ ಮನೆಗೆ ಧಾವಿಸಿ ಬಂದಿದ್ದರೂ, ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಮೆದಾಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸೊಸೆ ಸಾಪೇಕ್ಷಿ ಭಾರ್ಗವ ತಿಳಿಸಿದರು.