ಇಂದಿನಿಂದ ಫಿರಂಗಿ

ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಇಂದು `ಪದ್ಮಾವತಿ’ ಸಿನಿಮಾ ಎಲ್ಲೆಡೆ ತೆರೆಕಾಣುತ್ತಿತ್ತು. ಆದರೆ ವಿವಾದದಿಂದಾಗಿ ಆ ಸಿನಿಮಾ ಅನಿರ್ಧಿಷ್ಟಾವಧಿಗೆ ಮುಂದೆ ಹೋಗಿರುವುದರಿಂದ ಅದರ ಲಾಭ ಇಂದು ರಿಲೀಸ್ ಆಗುತ್ತಿರುವ `ಫಿರಂಗಿ’ ಚಿತ್ರಕ್ಕೆ ಸಿಗಬಹುದು ಎನ್ನುವ ನಿರೀಕ್ಷೆ ಇದೆ.

ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಎರಡನೇ ಬಾರಿಗೆ ದೊಡ್ಡ ಸ್ಕ್ರೀನಿನ ಮೇಲೆ ಈ ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾನೆ. ಚಿತ್ರದಲ್ಲಿ ಕಪಿಲ್ ಶರ್ಮಾ ಮುಗ್ಧ ಮೋಂಗಾ ಪಾತ್ರದಲ್ಲಿ ನಟಿಸಿದ್ದಾನೆ. ಇದೊಂದು ಬ್ರಿಟಿಶ್ ನಮ್ಮ ದೇಶವನ್ನಾಳಿದ ಸಮಯದ ಹಿನ್ನೆಲೆಯಲ್ಲಿನ ವಿಭಿನ್ನ ಕತೆಯಾಗಿದೆ. ಚಿತ್ರದಲ್ಲಿ ಕಪಿಲ್ ಜೊತೆ ಇಶಿತಾ ದತ್ತಾ, ಮೋನಿಕಾ ಗಿಲ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ರಾಜೀವ್ ಡಿಂಗ್ರಾ ಆಕ್ಷನ್ ಕಟ್ ಹೇಳಿದ್ದು ಸ್ವತಃ ಕಪಿಲ್ ಶರ್ಮಾ ಈ ಸಿನಿಮಾವನ್ನು ನಿರ್ಮಿಸಿದ್ದಾನೆ. ಚಿತ್ರದಲ್ಲಿ ಸಾಕಷ್ಟು ಕಾಮಿಡಿ ಸೀನುಗಳೂ ಇದ್ದು ಜೊತೆಗೇ ರೊಮ್ಯಾನ್ಸ್ ಕೂಡಾ ಇದೆ.