ಸುರತ್ಕಲಿನಲ್ಲಿ ಕೃತಕನೆರೆಗೆ ಕಾರಣವಾದ ಚರಂಡಿ ನಿರ್ಮಾಣ

ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಟರಾಜ್ ಥಿಯೇಟರ್ ಮುಂಭಾಗ ಚರಂಡಿ ನಿರ್ಮಾಣಕ್ಕೆಂದು ಪಾಲಿಕೆ ರಸ್ತೆ ಬದಿ ಅಗೆದು ಹಾಕಿದ್ದರಿಂದ ವಾಹನಗಳು ರಸ್ತೆ ಮಧ್ಯೆ ನಿಲ್ಲುವ ಸ್ಥಿತಿ ಬಂದಿದೆ. ಜೋರಾದ ಮಳೆ ಬಂದಾಗ ನೀರು ರಸ್ತೆಯಿಂದ ಇಳಿದು ಅಂಗಡಿಗಳ ಮುಂಭಾಗ ಕೃತಕ ನೆರೆಯನ್ನು ಸೃಷ್ಟಿಸುತ್ತಿದೆ. ಇದು ಅಪಘಾತಕ್ಕೂ ಕಾರಣವಾಗಿದೆ. ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಹೆದ್ದಾರಿಯಲ್ಲಿ ಚರಂಡಿ ನಿರ್ಮಿಸಲು ಪಾಲಿಕೆ ಮುಂದಾಗಿತ್ತು. ಚರಂಡಿಯಿಂದ ತೆಗೆದ ಮಣ್ಣನ್ನು ರಸ್ತೆ ಬದಿಗೆ ಹಾಕಲಾಗಿದ್ದು, ಈಗ ಚರಂಡಿ ಕಾಮಗಾಗಿ ಅರ್ಧ ನಿಂತು ಮೂರ್ನಾಲ್ಕು ವಾರ ಆಗುತ್ತಾ ಬಂತು. ಚರಂಡಿ ನಿರ್ಮಿಸಲು ಮಾಡಿದ ಅರೆಬರೆ ಕೆಲಸದಿಂದ ಜನ ಚರಂಡಿಗೆ ಬೀಳುವ ಮೊದಲು ಚರಂಡಿ ಕಾಮಗಾರಿ ಸುವ್ಯವಸ್ಥಿತವಾಗಿ ಮುಗಿಸಿಬಿಡಲಿ

  • ಕೀರ್ತನ್ ರಾವ್  ಇಡ್ಯಾ ಸುರತ್ಕಲ್