ಕಿಲೋಗಟ್ಟಲೆ ಗಾಂಜಾ ಸಹಿತ ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಾಲ್ಕೂವರೆ ಕಿಲೋ ಗಾಂಜಾದೊಂದಿಗೆ ಇಬ್ಬರನ್ನು ವಿದ್ಯಾನಗರ ಪೆÇಲೀಸರು ಸೆರೆ ಹಿಡಿದಿದ್ದಾರೆ.

ನೆಲ್ಲಿಕಟ್ಟ ಉನೈಸ್ (24) ಹಾಗು ನೀರ್ಚಾಲಿನ ಮುಸ್ತಫ (23) ಎಂಬವರು ಬಂಧಿತ ಆರೋಪಿಗಳು. ವಾಹನಕ್ಕಾಗಿ ಕಾಯುತಿದ್ದ ವೇಳೆ ಬಸ್ ನಿಲ್ದಾಣದಿಂದ ಇವರನ್ನು ಬಂಧಿಸಲಾಗಿದೆ. ಉನೈಸ್ ಕಳವು ಪ್ರಕರಣಗಳಲ್ಲಿ ಇವರು ಆರೋಪಿಯಾಗಳಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ತನಿಖೆಗೊಳಪಡಿಸಲಾಗಿದೆ.


ಗಾಂಜಾ ವಶಪಡಿಸಿಕೊಂಡ ಪ್ರಕರಣ : ಇನ್ನಿಬ್ಬರ ಸೆರೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಆದೂರಿನಲ್ಲಿ ಆಲ್ಟೋ ಕಾರಿನಲ್ಲಿ ಸಾಗಿಸಲಾಗುತಿದ್ದ ಆರು ಕಿಲೋ ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ಇನ್ನಿಬ್ಬರು ಯುವಕರನ್ನು ಬಂಧಿಸಿದ್ದಾರೆ.

ಕೊಟ್ಟಾರಕ್ಕರ ತಾಮ ರಶ್ಯೇರಿ ನಿವಾಸಿ ಎಂ ಎಸ್ ರಾಹುಲ್ (27) ಹಾಗು ಕೊಟ್ಟಾರಕ್ಕರ ಏಝುಪ್ಪಾಣಿ ನಿವಾಸಿ ರಾಹುಲ್ ನಾಥ್ (23) ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮಧ್ಯ ರಾತ್ರಿಯಲ್ಲಿ ಪೆÇಲೀಸರು ಆದೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸಲಾಗುತಿದ್ದ ಆರು ಕಿಲೋ ಗಾಂಜಾ ಸಹಿತ ಇಬ್ಬರನ್ನು ಬಂಧಿಸಿದ್ದರು. ಈ ಮಧ್ಯೆ ಇದೀಗ ಬಂಧಿತರಾದ ಇಬ್ಬರು ಆರೋಪಿಗಳು ಓಡಿ ಪರಾರಿಯಾಗಿದ್ದರು. ಇವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.