ಹಳೇ ದ್ವೇಷದಿಂದ ಯುವಕನ ಇರಿದು ಹತ್ಯೆ : ನಾಲ್ವರ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹಳೇ ದ್ವೇಷಕ್ಕೆ ಸಂಬಂಧಿಸಿ ಪಡೀಲ್ ಓವರ್ ಬ್ರಿಜ್ ಸಮೀಪದ ಕೋಡಕ್ಕಲ್ ಶಿವನಗರದಲ್ಲಿ ಹತ್ಯೆಗೀಡಾಗಿದ್ದ ಶಿವನಗರದ ನಿಸರ್ಗ್ (19) ಸಾವಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಡೀಲ್ ವೀರನಗರದ ಪುನೀತ್ ಯಾನೆ ಪಚ್ಚು, ಕಣ್ಣೂರು ಪೇರ್ಲ ಹೊಸಗುಡ್ಡೆಯ ಶರತ್ ಕೋಡಕ್ಕಲ್ ಮತ್ತು ನಿಖಿಲ್, ಕೋಡಕ್ಕಲ್ ಶಿವನಗರದ ಪ್ರಕಾಶ್ ಶೆಟ್ಟಿ ಬಂಧಿತ ಆರೋಪಿಗಳು.

ಸೆಪ್ಟೆಂಬರ್ 14ರಂದು ನಿಸರ್ಗ್ ಮತ್ತು ಆತನ ಮಿತ್ರರಾದ ನಿಶಾಂತ್, ಆಶಿಕ್, ಸೌರವ್, ಮನೀಶ್ ಮತ್ತು ಪ್ರವೀಣ್ ಜೊತೆ ಮೊಸರು ಕುಡಿಕೆ ಉತ್ಸವಕ್ಕೆ ಹೋಗಿ ವಾಪಾಸ್ ಬಂದು ಪಡೀಲ್ ಓವರ್ ಬ್ರಿಜ್ ಸಮೀಪ ರಾತ್ರಿ 2.30ರ ಸುಮಾರಿಗೆ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಅವರ ಪರಿಚಯದವರೇ ಆಗಿದ್ದ ಪುನೀತ್ ಯಾನೆ ಪಚ್ಚು, ಶರತ್ ಕೋಡಕ್ಕಲ್, ಪ್ರಕಾಶ್ ಶೆಟ್ಟಿ ಅವರು ಅಲ್ಲಿಗೆ ಬಂದಿದ್ದರು. ಈ ಸಂದರ್ಭ ಅವರೊಳಗೆ ಮಾತಿನ ಚಕಮಕಿ ನಡೆದಿದ್ದು, ಎರಡೂ ತಂಡಗಳೊಳಗೆ ಹೊಡೆದಾಟ ನಡೆದಿತ್ತು.