ಸಂಜಯಗೆ ಬಂಧನ ವಾರೆಂಟ್

ಮುಂಬೈ : ಚಿತ್ರ ನಿರ್ಮಾಪಕ ಶಕೀಲ್ ನೂರಾನಿ ಸಲ್ಲಿಸಿರುವ ಕ್ರಿಮಿನಲ್ ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ಉತ್ತರಿಸಲು ಕೋರ್ಟಿಗೆ ಹಾಜರಾಗದ ಬಾಲಿವುಡ್ ನಟ ಸಂಜಯ್ ದತ್ತಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟೊಂದು ನಿನ್ನೆ ಬಂಧನ ವಾರೆಂಟ್ ಜಾರಿ ಮಾಡಿದೆ. “ಈ ಪ್ರಕರಣ ಸುದೀರ್ಘ ಸಮಯದಿಂದ ನಡೆಯುತ್ತಿದೆ. ನಮ್ಮ ವಕೀಲರು ಮತ್ತು ನಮ್ಮ ಮಧ್ಯೆ ಸಂವಹನ ಅಂತರದಿಂದ ಪ್ರಸಕ್ತ ಸಮಸ್ಯೆ ಉಂಟಾಗಿದೆ. ನಮ್ಮ ಹಾಜರಾತಿ ಬಗ್ಗೆ ಕೋರ್ಟ್ ತೋರಿಸಿರುವ ತುರ್ತಿಗೆ ಗೌರವ ನೀಡುತ್ತವೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳುವೆವು” ಎಂದು ದತ್ ವಕ್ತಾರರು ತಿಳಿಸಿದ್ದಾರೆ.