ಅನ್ಯಕೋಮಿನ ವಿರುದ್ಧ ವಾಗ್ದಾಳಿ ನಡೆಸಲಾದ ಆರೆಸ್ಸೆಸ್ ವೇದಿಕೆಯಲ್ಲಿ ಸೇನಾ ಜನರಲ್ಲುಗಳು

ನಾಗ್ಪುರ : ಆರೆಸ್ಸೆಸ್ ಅಧ್ಯಕ್ಷ, ಸಾಧುಗಳು ಉಪಸ್ಥಿತರಿದ್ದ `ಪ್ರಖರ’ ಹಿಂದೂತ್ವ  ಪ್ರಚಾರದ ವೇದಿಕೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಜನರಲ್ಲುಗಳ ಹಾಜರಾತಿ ಅಚ್ಚರಿ ಮೂಡಿಸಿದೆ.

ಸಭೆಯಲ್ಲಿ, ಈ ದೇಶದಲ್ಲಿ ಹಿಂದಿನ ಸಾವಿರ ವರ್ಷದ ಅವಧಿಯಲ್ಲಿ ಮುಸ್ಲಿಂ ಸಾಮ್ರಾಜ್ಯವಿದ್ದು, ಹಿಂದೂಗಳಿಗಾಗಿರುವ ಅನ್ಯಾಯದ ಪಟ್ಟಿ ಮಾಡುತ್ತ ಟೀಕಿಸಿದ ಮೋಹನ್ ಭಾಗ್ವತ್, “ಪ್ರಜಾಪ್ರಭುತ್ವದಲ್ಲಿ ಈ ದೇಶದ ಜನರಿಗೆ ಅಧಿಕಾರ ಸ್ಥಾಪಿಸಲು ಅವಕಾಶ ಸಿಕ್ಕಿರಲಿಲ್ಲ” ಎಂದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರಕ್ಕೆ ಬಂದ ಬಳಿಕ ಭಾರತೀಯ ಸೇನೆಯಲ್ಲಿ ಕೋಮುವಾದದ ನಿಜವಾದ ಗುಟ್ಟು ರಟ್ಟಾಗಿದೆ ಎಂದವರು ಹೇಳಿದರು.

ಅಚ್ಚರಿಯೆಂದರೆ, ಮಾಜಿ ಸೇನಾ ಮುಖ್ಯಸ್ಥ ಎನ್ ಸಿ ವಿಜ್, ಮಾಜಿ ಐಎಎಫ್ ಉಪಾಧ್ಯಕ್ಷ ಏರ್ ಮಾರ್ಶಲ್ ಭೂಷಣ್ ಗೋಖಲೆ ಮತ್ತು ಲೆ ಜ ಸಾಯಿದ್ ಅತ ಹಸನೈನ್ ಹೆಸರು ಈಗ ಜಮ್ಮು-ಕಾಶ್ಮೀರ ರಾಜ್ಯಪಾಲ ಹುದ್ದೆಯ ರೇಸಿನಲ್ಲಿದೆ. ಇವರೆಲ್ಲ ಡಿ 24ರಂದು ನಡೆದಿದ್ದ ಸಾಧುಗಳ ಧರ್ಮ ಸಂಸ್ಕøತಿ ಮಹಾಕುಂಭದಲ್ಲಿ ಮೋಹನ್ ಭಾಗ್ವತ್ ಜತೆ ವೇದಿಕೆ ಹಂಚಿಕೊಂಡಿದ್ದರು. ಆರೆಸ್ಸೆಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಿಂದೂತ್ವದ ವಿಷಯದಲ್ಲಿ ಸಾಧುಗಳು ಭಾರೀ ಭಾಷಣ ಬಿಗಿದಿದ್ದಾರೆ.

“ಸಿಯಾಚಿನ್ ಹಿಮನದಿಯಲ್ಲಿ ಸೈನಿಕರಿಗೆ ದಾರಿದೀಪವಾದವರು ನಾಗ ಸಾಧುಗಳು. ಸೈನಿಕರು ಮತ್ತು ಸಾಧುಗಳು ರಾಷ್ಟ್ರಕ್ಕಾಗಿ ಜೀವ ತೇಯುವವರು. ಹಾಗಾಗಿ ಇಬ್ಬರಿಗೂ ಸಮಾನ ಗೌರವ ಸಿಗಬೇಕು” ಎಂದು ಅಮರಾವತಿ ಮೂಲದ ಜೀತೇಂದ್ರ ಮಹಾರಾಜ್ ಅಭಿಪ್ರಾಯಪಟ್ಟರು. ಇವರ ಅನುಯಾಯಿಗಳಲ್ಲಿ ಮೋಸಗಾರ ಪ್ರಶಾಂತ್ ವಾಸಂಕರ್, ಸಮೀರ್ ಜೋಶಿ ಹಾಗೂ ಪೋಂಝಿ ಯೋಜನೆಗಳನ್ನು ಸಂಚಾಲಿಸುತ್ತಿರುವ ಇತರರು ಶಾಮೀಲಾಗಿದ್ದಾರೆ.

ವಿಜಿಯವರು ವಿವೇಕಾನಂದ ಅಂತಾರಾಷ್ಟ್ರೀಯ ಒಕ್ಕೂಟದ ನಿರ್ದೇಶಕರಾಗಿದ್ದು, ಇದು ಆರೆಸ್ಸೆಸ್ ವಿಚಾರ ವೇದಿಕೆಯಾಗಿದೆ. ಇಲ್ಲಿಗೆ ಭೇಟಿ ನೀಡುವವರಲ್ಲಿ ಹಸನೈನ್ ಒಬ್ಬರಾಗಿದ್ದಾರೆ.

“ಈ ದೇಶದಲ್ಲಿ ಸಾಧುಗಳಿಗೂ, ಸೈನಿಕರಿಗೂ ಸಮಾನ ಗೌರವ ಸಿಗಬೇಕು. ಹುತಾತ್ಮರಾದ ಸೈನಿಕರ ಕುಟುಂಬದೊಂದಿಗೆ ನಾವೆಲ್ಲರೂ ಇರಬೇಕು” ಎಂದು ಭಾಗ್ವತ್ ಹೇಳಿದರು.