ಅಡಿಕೆ ಕಳ್ಳನ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಡಬ : ಇಲ್ಲಿನ ನೆಟ್ಟಣ ಎಂಬಲ್ಲಿ ಸತ್ತಾರ್ ಎಂಬವರಿಗೆ ಸೇರಿದ ಅಡಿಕೆ ಗೋದಾಮಿನಿಂದ ಅಡಿಕೆಯನ್ನು ಕದ್ದೊಯ್ದಿದ್ದ ಕಳ್ಳನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಮಹಮ್ಮದ್ ಇಸಾಕ್ (32ವ) ಬಂಧಿತ. ಮಾರುತಿ 800 ಕಾರಿನಲ್ಲಿ ಇಸಾಕ್ ತನ್ನ ತಂಡದೊಂದಿಗೆ ಆಗಮಿಸಿ ಕಳವು ಕೃತ್ಯಕ್ಕೆ ಮುಂದಾಗಿದ್ದ. ಗೋದಾಮಿನ ಬಾಗಿಲನ್ನು ಮುರಿಯುವ ಶಬ್ದ ಕೇಳಿ ಮಾಲಕ ಸತ್ತಾರ್ ಆಗಮಿಸಿದಾಗ ಎರಡು ಚೀಲ ಅಡಿಕೆಯೊಂದಿಗೆ ಕಾರನ್ನು ಬಿಟ್ಟು ಆರೋಪಿ ಎಸ್ಕೇಪ್ ಆಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಡಬ ಪೊಲೀಸರು ಪ್ರಮುಖ ಆರೋಪಿಯನ್ನು ಇದೀಗ ಬಂಧಿಸುವಲ್ಲಿ ಸಫಲರಾಗಿದ್ದಾರೆ.