ಅಡಿಕೆ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ಎಂಬವರ ಮನೆಯ ಮುಂಭಾಗದ ಸಿಟೌಟಿನಲ್ಲಿ ಇರಿಸಲಾಗಿದ್ದ 9 ಅಡಿಕೆ ಗೋಣಿಯನ್ನು ಕಳವುಗೈದಿರುವ ಘಟನೆ ಬೆಳಕಿಗೆ ಬಂದಿದ್ದು, ತನ್ನ ಪರಿಚಯದ ವ್ಯಕ್ತಿಗಳೇ ಇದನ್ನು ಕಳವು ಮಾಡಿದ್ದಾರೆ ಎಂದು ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಪಕ್ಕದ ಮನೆಯ ಕೆ ಕೆ ಇಸ್ಮಾಯಿಲರ ಅಳಿಯ ಇಮ್ರಾನ್ ಎಂಬಾತನು ನಿಜಾಮುದ್ದೀನ್ ಮತ್ತು ಅನ್ಸಾರ್ ಎಂಬವರುಗಳೊಂದಿಗೆ ಸೇರಿಕೊಂಡು ರಿಕ್ಷಾ ತೆಗೆದುಕೊಂಡು ಬಂದು ಸಿಟೌಟಿನಲ್ಲಿಟ್ಟಿದ್ದ ಸುಮಾರು 60 ಕೇಜಿ ತೂಕದ 5 ಗೋಣಿ ಚೀಲದಲ್ಲಿದ್ದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಮೊಹಮ್ಮದ್ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.