ಅಡಿಕೆ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಕರಾಯ ಕಟ್ಟೆ ನಿವಾಸಿ ಚಂದ್ರಶೇಖರ್ ಎಂಬವರ ಮನೆಯ ಸಿಟೌಟಿನಲ್ಲಿರಿಸಲಾಗಿದ್ದ ಒಂದು ಕಿಂಟ್ವಾಲ್ ಅಡಕೆಯನ್ನು ಕಳ್ಳರು ಕದ್ದೊಯ್ದ ಘಟನೆ ಬಗ್ಗೆ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ.

ಸುಲಿದು ಗೋಣಿಯಲ್ಲಿ ತುಂಬಿಸಿಡಲಾಗಿದ್ದ 50 ಕೇಜಿ ಅಡಕೆಯಲ್ಲದೆ, ಮೂರು ಗೋಣಿಗಳಲ್ಲಿ ತುಂಬಿಸಿಡಲಾಗಿದ್ದ ಸುಲಿಯದ ಅಡಕೆಯನ್ನೂ ಕದ್ದೊಯ್ದಿದ್ದಾರೆಂದು ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.