ಇವು ಕನ್ನಡ ಚಿತ್ರಗಳಾ

ಒಂದು ಕಾಲದಲ್ಲಿ ಯಶಸ್ವಿ  ಭರ್ಜರಿ ಕನ್ನಡ ಚಿತ್ರಗಳ ಯುಗವೇ ಇತ್ತು  ಅದು ಎಲ್ಲ ಮುಗಿದ ಕತೆ  ಯಶಸ್ವಿ ನಿರ್ದೇಶಕರು  ನಟರು ಎಲ್ಲಿ ಸ್ವಾಮಿ   ಈಗ ಬರುತ್ತಿರುವ ಕನ್ನಡ ಚಲನ ಚಿತ್ರಗಳು ಯಾವುದೂ ಒಳ್ಳೆಯದಿಲ್ಲ   ಥಿಯೇಟರ್ ಎಲ್ಲ ಖಾಲಿ ಖಾಲಿ   ಎಲ್ಲಿಗೆ ಬಂತು ಕನ್ನಡದ ದುರ್ಗತಿ  ಈಗ ಬರುತ್ತಿರುವ ಚಲನಚಿತ್ರದ ಹೆಸರು ಕೇಳಿದರೆ ನಾಚಿಕೆ ಅಸಹ್ಯ   ಹೆಸರು ಕೇಳಿ ನುಗ್ಗೆಕಾಯಿ  ಅವಲಕ್ಕಿ  ಮಸಾಲ ಎನ್ ಎಚ್ 37  ನೀರ್ ದೋಸೆ  ಗಿರ್ ಗಿಟ್ಲೆ  ಅಸ್ಲಿ  ಹೆಸರುಬೇಳೆ  ಹೀಗೆ ಅಸಂಬದ್ಧ ಹೆಸರುಗಳು  ಇನ್ನಾದ್ರೂ ಒಳ್ಳೆ ರೀತಿಯ ಕನ್ನಡ ಚಿತ್ರ ಬಂದರೆ ಮಾತ್ರ ಕನ್ನಡ ಉಳಿದೀತು

  • ಆರ್ ರಘುರಾಜ್  ಪುತ್ತೂರು