ನೋಟು ರದ್ಧತಿ ವಿರೋಧಿಸುವವರೆಲ್ಲ ಭಯೋತ್ಪಾದಕರೇ

ಪ್ರಧಾನಿ ಮೋದಿಯವರು ಸ್ವ ಕ್ಷೇತ್ರ ವಾರಣಾಸಿಯಲ್ಲಿ ಭಾಷಣ ಮಾಡುತ್ತಾ ನೋಟು ರದ್ಧತಿ ವಿರೋಧಿಸುವವರು ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ಥಾನಕ್ಕೆ ಸಮಾನರು ಹಾಗೂ ಉಗ್ರವಾದಿಗಳ ಬೆಂಬಲಿಗರು ಎಂದು ಹೇಳಿದ್ದನ್ನು ಕೇಳಿರಬಹುದು  ಹಾಗಾದರೆ ಮೋದಿಯವರೇ  ನಿಮ್ಮದೇ ಎನ್ ಡಿ ಎ ಬಣದ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು  ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಮಹಾರಾಷ್ಟ್ರದ ಶಿವಸೇನೆಯ ಉದ್ಭವ್ ಠಾಕ್ರೆ ಇವರೇ ನಿಮ್ಮ ನೋಟಿ ರದ್ಧತಿ ಯೋಜನೆ ಒಂದು ದೊಡ್ಡ ತಪ್ಪು ನಿರ್ಧಾರ ಎಂದು ಹೇಳಿದ್ದಾರಲ್ಲ   ಈ ಬಗ್ಗೆ ನೀವೇನು ಹೇಳುತ್ತೀರಿ   ಹಾಗಾದರೆ ಇವರೆಲ್ಲ ಪಾಕಿಸ್ಥಾನಿಗಳೇ ಅಥವಾ ಭಯೋತ್ಪಾದಕರ ಬೆಂಬಲಿಗರೇ ಅಥವಾ ಕಾಳಧನಿಕರ ರಕ್ಷಕರೇ
ಮಾತು ಮಾತಿಗೆ ಪಾಕಿಸ್ಥಾನವನ್ನು ಹಾಗೂ ಉಗ್ರವಾದಿಗಳನ್ನು ತಮ್ಮ ಭಾಷಣದಲ್ಲಿ ಎಳೆದು ತರುವುದನ್ನು ಮೋದಿ  ಅಮಿತ್ ಷಾ ಬಿಜೆಪಿಯವರು ಇನ್ನಾದರೂ ನಿಲ್ಲಿಸಬೇಕಾಗಿದೆ. ಯಾಕೆಂದರೆ ಹಿಂದಿನ ಒಂದೂವರೆ ತಿಂಗಳಿನಿಂದ ಬ್ಯಾಂಕಿನ ಎದುರು ಸಾಲಿನಲ್ಲಿ ನಿಂತು ಬಸವಳಿದಿರುವವರು ಪಾಕಿಸ್ಥಾನಿಗಳಲ್ಲ, ಬ್ಯಾಂಕಿನ ಮುಂದೆ ಸಾಲಿನಲ್ಲಿ ನಿಂತು ಮರಣ ಹೊಂದಿರುವ ನೂರಾರು ಜನ ಅಮಾಯಕರು ಪಾಕ್ ಉಗ್ರವಾದಿಗಳೂ ಆಗಿರಲಿಲ್ಲ. ಅವರೆಲ್ಲ ನಮ್ಮದೇ ಬಡ ಭಾರತೀಯ ಬಂಧುಗಳು
ಪಾಕ್ ರಾಜಕಾರಣಿಗಳು ಏನೇ ಕೆಟ್ಟದ್ದನ್ನು ಮಾಡಿದರೂ ಅದನ್ನು ತಮ್ಮ ವೈರಿ ದೇಶದವರಿಗೆ ಮಾಡುತ್ತಾರೆಯೇ ವಿನಃ ತಮ್ಮದೇ ದೇಶದ ನಾಗರಿಕರಿಗೆ ಕೆಟ್ಟದು ಮಾಡುವುದಿಲ್ಲ  ಆದರೆ  ಮೋದಿಯವರು ತಮ್ಮ ದೇಶದ 130 ಕೋಟಿ ಜನರನ್ನು ಘೋರ ಕಷ್ಟಕ್ಕೆ ನೂಕಿ ತಮ್ಮ ಚೇಲಾ ಉದ್ಯಮಿ ಅಂಬಾನಿಗಳ ಜಿಯೋ ಮನಿ ಅಥವಾ ಚೀನಾದ ಪೇಟಿಎಂ ಕಂಪೆನಿಗಳ ಸೇಲ್ಸ್ ಮ್ಯಾನನಂತೆ ಹಾಗೂ ವಿದೇಶಿ ಕಂಪೆನಿಗಳ ಏಜಂಟರಂತೆ ವರ್ತಿಸುತ್ತಿರುವವರು ಎಂಬ ಆರೋಪ ಸರಿ ಅನಿಸುತ್ತಿದೆ
ಮೋದಿಯ ನೋಟು ರದ್ಧತಿ ಯೋಜನೆ ಪ್ರಬುದ್ಧ ಯೋಜನೆ ಆಗಿದ್ದರೆ ಅವರು ಕೇವಲ 43 ದಿನಗಳಲ್ಲಿ 60ಕ್ಕೂ ಹೆಚ್ಚು ತಿದ್ದುಪಡಿ ತರುತ್ತಿರಲಿಲ್ಲ. ಈಗ ಈ ತಿದ್ದುಪಡಿ ನೋಡಿದಾಗ ಒಬ್ಬ ತಿರುಕನ ತೇಪೆ ಹಚ್ಚಿದ ಬಟ್ಟೆಗಿಂತ ಹೆಚ್ಚು ಅಸ್ತವ್ಯಸ್ತವಾಗಿ ಕಾಣುತ್ತದೆ   ತಾನೇ ಮಹಾ ಬುದ್ಧಿವಂತ ಎಂದು ತಪ್ಪು ತಿಳಿದುಕೊಂಡಿರುವ ಮೂರ್ಖ ವ್ಯಕ್ತಿಯೇ ನಿಜವಾಗಿ ಅಪ್ರಬುದ್ಧ ವ್ಯಕ್ತಿಗಿಂತ ಹೆಚ್ಚು ಅಪಾಯಕಾರಿ  ಎಂದು ದಾರ್ಶನಿಕರು ಹೇಳಿರುವುದು ನೂರಕ್ಕೆ ನೂರು ಸರಿಯಾಗಿದೆ

  • ಕೆ ನವೀನ್ ಸುವರ್ಣ
    ತೊಕ್ಕೊಟ್ಟು-ಉಳ್ಳಾಲ