ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಗುಲಾಮರೇ

ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಗೆ ಏನು ಕೆಲಸ   ಕರಾವಳಿ ಅಲೆ  ಸ್ಪಂದನ ವಿಭಾಗದಲ್ಲಿ ಜನವರಿ 7ರಂದು ಮುರಾರಿ ಪುತ್ತೂರು ಬರೆದ ದೂರಿಗೆ ನನ್ನದು ಪ್ರತಿಕ್ರಿಯೆ

 
ಸಾರ್ವಜನಿಕ ಸೇವೆ ಮಾಡುವ ಬ್ಯಾಂಕುಗಳ ಸಿಬ್ಬಂದಿಗಳು ಇಚ್ಛಾನುಚಾರ ವರ್ತಿಸುವುದು ಮಾನವೀಯತೆಯೇ  ಸುಶಿಕ್ಷಿತ ನಮ್ಮನ್ನು ಸತಾಯಿಸುವುದು ಸರಕಾರದ ಧೋರಣೆಯೇ   80-90ರ ದಶಕದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ನಮ್ಮ ಹಣ ತೆಗೆಯುಲು  ಆಧಾರ್ ಕಾರ್ಡ್ ಕಡ್ಡಾಯವಂತೆ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭು ಪ್ರಜೆಗಳನ್ನು ಗುಲಾಮರಂತೆ ಕಾಣುವುದು ಯಾವ ನ್ಯಾಯ   ಗುರುತು ಚೀಟಿ  ಪಾನ್ ಕಾರ್ಡ್ ಇನ್ನಿತರ ದಾಖಲೆಗಳಿರುವ ಜನಸಾಮಾನ್ಯರಿಗೆ ಆಧಾರ್ ಕಾರ್ಡ್ ಕಡ್ಡಾಯ  ಎಂಬ ಆದೇಶದ ಪ್ರತಿಯನ್ನು ಬ್ಯಾಂಕಿನವರು ತಮ್ಮ ಗ್ರಾಹಕರಿಗೆ ಕೊಡಲು ಸಿದ್ಧರಿದ್ದಾರೆಯೇ   ಬ್ಯಾಂಕಿಗೆ ಅಂತಹ ಆದೇಶದ ಪ್ರತಿ ಬಂದಿದೆಯೇ   ನಮ್ಮ ದುಡಿತದ ಫಲ ಉಣ್ಣುವುದು ನಮಗೆ ಸಂಬಂಧಪಟ್ಟಿದ್ದು  ಒಬ್ಬ ವ್ಯಕ್ತಿಗೆ ಬದುಕಲು  ದುಡಿಯಲು ಹಕ್ಕಿದೆ  ತನ್ನ ಜೀವಿತ ಅವಧಿಯಲ್ಲಿ ತನ್ನ ದೈಹಿಕ ಬಲ ಇರುವಾಗ ದುಡಿತದ ಫಲವನ್ನು ತನ್ನ ಮುಪ್ಪಿನಲ್ಲಿ ವಿನಿಯೋಗಿಸಬೇಕೆಂದು ಬ್ಯಾಂಕಿನಲ್ಲಿ ಜಮಾ ಮಾಡುತ್ತಾನೆ  ಅದೂ ಕಸಿದು ಕೊಳ್ಳುವ ದುಷ್ಟಶಕ್ತಿಗೆ ಕಡಿವಾಣ ಹಾಕಲು ಜನಸಾಮಾನ್ಯರು ಹಿಂದೇಟು ಏಕೆ ಆಗುತ್ತಾರೆ  ಭ್ರಷ್ಟಾಚಾರದಲ್ಲಿ ರಾಶಿರಾಶಿ ಹಣದ ಕಣಜ ನಿರ್ಮಾಣವಾದ ಹಣ ಎಲ್ಲಿಗೆ ಹೋಯಿತು   ಅವರಿಗೆ ಶಿಕ್ಷೆ ಇಲ್ಲವೇ  ಬಡವರು ಒಂದು ರೂಪಾಯಿ ಕದ್ದರೆ ಅವನಿಗೆ ಜೈಲಿಗೆ ಹಾಕುತ್ತಾರೆ  ಐಷರಾಮಿಗಳಿಗೆ ಏಕೆ ಜೈಲಿಗೆ ಅಟ್ಟಿಸುವುದಿಲ್ಲ  ಇದು ನ್ಯಾಯಾಂಗದ ಅಧೋಗತಿ   ಆಧಾರ್‍ಕಾರ್ಡ್ ಇದ್ದು ಅವನು ದುಡಿಯುವುದಿಲ್ಲ  ಬ್ಯಾಂಕಿನಲ್ಲಿ ಹಣ ಹಾಕುವುದಿಲ್ಲ  ಆಧಾರ್ ಕಾರ್ಡ್ ಆತನಿಗೆ ಮೂರು ಹೊತ್ತು ಹೊಟ್ಟೆಗೆ ಹಿಟ್ಟು ಕೊಡುತ್ತಿದೆಯೇ  ಜನಸಾಮಾನ್ಯರೇ ಎಚ್ಚೆತ್ತುಕೊಳ್ಳಿ

  • ಎ ಎಫ್ ಪಿಂಟೋ ಎಕ್ಕಾರು ಮಂಗಳೂರು