ಅರಸು ಮಜಲ್ ತಂಡ ಪ್ರಥಮ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಯುವಕರು ಆಕರ್ಷಕರಾಗುತ್ತಿದ್ದಾರೆ ತೂಮಿನಾಡು ಅರಬ್ ರೈಡರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅರಬ್ ನೈಟ್ ಟ್ರೋಫಿ 2017 ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾಟ ಭಾರೀ ವಿಜ್ರಂಭಣೆಯಿಂದ ನೆರವೇರಿತು.

ಐಪಿಎಲ್ ಪೆÇ್ರ ಕಬಡ್ಡಿ ಪಂದ್ಯಾಟದ ರೀತಿಯಂತೆ ಸಜ್ಜೀಕರಿಸಿದ ಅಂಗಣದಲ್ಲಿ ಜರುಗಿದ ಪಂದ್ಯಾಟದಲ್ಲಿ ಕೇರಳ ಕರ್ನಾಟಕ ತಂಡಗಳ ಆಟಗಾರರು ಸೇರಿದಂತೆ ಸುಮಾರು 28 ತಂಡಗಳು ಭಾಗವಹಿಸಿದ್ದು, ಅಂತಿಮ ರೋಚಕ ಹಣಾ ಹಣಿಯಲ್ಲಿ ಶಿವ ಶಕ್ತಿ ಕುಂಜತ್ತೂರು ತಂಡವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ ಕುಂಜತ್ತೂರಿನ ಶ್ರೀ ಅರಸು ಮಜಲ್ ತಂಡ ಪ್ರಥಮ ಸ್ಥಾನಿಯಾಗಿ `ಅರಬ್ ನೈಟ್ ಟ್ರೋಫಿ-2017’ಯನ್ನು ತನ್ನದಾಗಿಸಿತು. ಆಟ ವೀಕ್ಷಿಸಲು ಕಬಡ್ಡಿ ಪ್ರೇಮಿಗಳ ಪ್ರವಾಹವೇ ಹರಿದುಬಂದಿತ್ತು.