ಅರಬ್ ರೈಡರ್ಸ್ ಪ್ರಥಮ

ವಿಜೇತ ಅರಬ್ ರೈಡರ್ಸ್ ತಂಡ

ಮಂಜೇಶ್ವರ ಬ್ಲಾಕ್ ಮಟ್ಟದ ಕಬಡ್ಡಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂ.ನಲ್ಲಿ ನಡೆಯುತ್ತಿರುವ ಕೇರಳೋತ್ಸವದ ಅಂಗವಾಗಿ ಬ್ಲಾಕ್ ಪಂ ವ್ಯಾಪ್ತಿಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ತೂಮಿನಾಡು ಅರಬ್ ರೈಡರ್ಸ್ ತಂಡ ಟ್ರೋಪಿಯನ್ನು ತನ್ನದಾಗಿಸಿದೆ.

ಆರು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಫೈನಲಿನಲ್ಲಿ ಫ್ರೆಂಡ್ಸ್ ಕೆದಂಬಾಡಿ ಹಾಗೂ ಅರಬ್ ರೈಡರ್ಸ್ ತಂಡ ಎದುರುಬದರಾಗಿದ್ದು, ಒಂದು ಅಂಕದೊಂದಿಗೆ ಅರಬ್ ರೈಡರ್ಸ್ ತಂಡ ಟ್ರೋಪಿಯನ್ನು ತನ್ನದಾಗಿಸಿದೆ. ಭಾನುವಾರ ಎಸ್ ಎ ಟಿ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಟ್ರೋಪಿಯನ್ನು ವಿತರಿಸಲಾಗುತ್ತಿದೆ. ಕ್ರೀಡೆಯಲ್ಲಿ ಪ್ರತಿಭಾವಂತರನ್ನು ಗುರುತಿಸಲು ಕಳೆದ ಕೆಲವು ವರ್ಷಗಳಿಂದ ಬ್ಲಾಕ್ ಪಂ ಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಅದರಲ್ಲೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಯುವಕರು ಉತ್ಸಾಹ ತೋರುತ್ತಿರುವುದು ಕಂಡುಬರುತ್ತಿದೆ.