ಕೆಎಸ್ಸಾರ್ಟಿಸಿ ವಿಚಾರಣೆ ಕೇಂದ್ರದಲ್ಲಿ ತಾಳ್ಮೆ ಇದ್ದವರನ್ನು ಮಾತ್ರ ಕೂರಿಸಿ

ಲಾಲ್‍ಬಾಗನಲ್ಲಿರುವ ಮಂಗಳೂರಿನ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ವಿಚಾರಣೆ ಕೇಂದ್ರದಲ್ಲಿ ಕುಳಿತುಕೊಳ್ಳುವ ಸಾರಿಗೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಪ್ರಯಾಣಿಕರು ಇಂತಿಂಥ ಊರಿಗೆ ಬಸ್ಸು ಎಷ್ಟು ಗಂಟೆಗೆ, ಇಂಥ ನಂಬ್ರರಿನ ಬಸ್ ಬಂತಾ ಇತ್ಯಾದಿ ಪ್ರಯಾಣಿಕರು ಇಲ್ಲಿನ ಅಧಿಕಾರಿಗಳಲ್ಲಿ ಕೇಳಿದರೆ ಯಾರೊಬ್ಬರೂ ಉತ್ತರ ಸರಿ ಕೊಡುತ್ತಿಲ್ಲ. ಸರಕಾರಿ ಕೆಲಸ ದೇವರ ಕೆಲಸ ಎಂದು ಹೇಳಿಕೊಂಡು ಅಸಹಾಯಕ ಪ್ರಯಾಣಿಕರಲ್ಲಿ ಇವರು ನಡೆಯುತ್ತಿರುವ ವರ್ತನೆ ಎಷ್ಟು ಮಾತ್ರಕ್ಕೂ ಇರುವುದಿಲ್ಲ.
ಸಂಬಂಧಪಟ್ಟವರು ಹೀಗಿರುವ ಸಿಬ್ಬಂದಿಯನ್ನು ಬದಲಿಸಿ ವ್ಯವಧಾನದಿಂದ ಪ್ರಯಾಣಿಕರೊಡನೆ ಉತ್ತಮ ರೀತಿಯಲ್ಲಿ ಕೇಳಿದ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸುವವರನ್ನು ಮಾತ್ರ ಕುಳಿತುಕೊಳ್ಳಿಸಿ

  • ಸುರೇಶ್ ಶೆಟ್ಟಿ  ಬಿಜೈ ಮಂಗಳೂರು