ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಿಸಿ ಇಲ್ಲವೇ ಅವನ್ನು ಬರ್ಖಾಸ್ತು ಮಾಡಿ

ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಡಿಯಲ್ಲಿರುವ ಏಳು ಅಕಾಡೆಮಿಗಳಲ್ಲಿ ಅಧ್ಯಕ್ಷರೇ ಇಲ್ಲವಾಗಿ ಅವರ ಕುರ್ಚಿಗಳೆಲ್ಲಾ ಖಾಲಿಯಂತೆ. ಇದು ನಮ್ಮ ಸರಕಾರದ ಕಾರ್ಯವೈಖರಿ. ಒಂದು ಇದ್ದರೆ ಮತ್ತೊಂದಿಲ್ಲ. ಮತ್ತೊಂದಿದ್ದರೆ ಇನ್ನ್ಯಾವುದೋ ಇಲ್ಲ. ರಾಜ್ಯದಲ್ಲಿ 12 ಅಕಾಡೆಮಿಗಳಿವೆ. ಏಳು ಅಕಾಡೆಮಿಗಳ ಅಧ್ಯಕ್ಷರ ಅವಧಿ ಫೆ 26ರಂದು ಕೊನೆಗೊಂಡಿದೆ. ಆದರೆ ಇವರ ಖಾಲಿ ಸ್ಥಾನಕ್ಕೆ ಅಧ್ಯಕ್ಷರೇ ನೇಮಕಗೊಂಡಿಲ್ಲ. ಅಧ್ಯಕ್ಷರಿಲ್ಲದಿದ್ದರೆ ಕಚೇರಿ ಕೆಲಸ ಕಾರ್ಯಗಳು ಬಿಟ್ಟರೆ ಬೇರೆ ಕಾರ್ಯಕ್ರಮಗಳನ್ನು ಜರಗಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರಾದರೂ ಯಾರು  ಹೀಗಾಗಿ ಅಕಾಡೆಮಿ ಕೆಲಸ ಕಾರ್ಯ ಕುಂಠಿತವಾಗುವುದಿಲ್ಲವೇ   ರಥ ಇದ್ದು ರಥ ಓಡಿಸಲು ಜನವಿಲ್ಲದಿದ್ದರೆ ಏನು ಪ್ರಯೋಜನ  ಇಲ್ಲವೇ ಈ ಅಕಾಡೆಮಿಗಳನ್ನೆಲ್ಲ ರದ್ದು ಮಾಡಿದರೆ  ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ಸಂಬಳದ ಖರ್ಚಾದರೂ ಸರಕಾರಕ್ಕೆ ಉಳಿಯುತ್ತದೆ

  • ಜೆ ಎಫ್ ಡಿಸೋಜ  ಅತ್ತಾವರ