`ಜಲಿಯನವಾಲಾ ಹತ್ಯಾಕಾಂಡಕ್ಕೆ ಬ್ರಿಟಿಷ್ ಸರಕಾರ ಕ್ಷಮೆ ಯಾಚಿಸಲಿ’

ಲಂಡನ್ ಮೇಯರ್ ಆಗ್ರಹ

ಅಮೃತಸರ : 1919ರಲ್ಲಿ ಬ್ರಿಟಿಷ್ ಸೈನಿಕರು ನಡೆಸಿದ್ದ ಜಲಿಯನವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟಿಷ್ ಸರಕಾರ ಭಾರತದ ಕ್ಷಮೆ ಯಾಚಿಸಬೇಕೆಂದು ಲಂಡನ್ ಮೇಯರ್  ಸಾದಿಕ್ ಖಾನ್ ಹೇಳಿದ್ದಾರೆ. ಗೋಲ್ಡನ್ ಟೆಂಪಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು, “ಇದು ಭಾರತೀಯ ಇತಿಹಾಸದಲ್ಲಿ ಅತ್ಯಂತ ದುರಂತಮಯ ಘಟನೆ” ಎಂದರು. 1919 ಎಪ್ರಿಲ್ 13ರಂದು ಬ್ರಿಟಿಷ್ ಸೈನಿಕರು ನಾಗರಿಕ ಮೇಲೆ ಯದ್ವಾತದ್ವ ಗುಂಡಿನ ಮಳೆಗರೆದಿದ್ದರು.