ಪುತ್ತೂರು ಸಂತೆ ನಗರಕ್ಕೆ ಬರುವುದು ಬೇಡ ವ್ಯಾಪಾರಕ್ಕೆ ಎಪಿಎಂಸಿ ಯಾರ್ಡ್ ಸೂಕ್ತ ಸ್ಥಳ

ಪುತ್ತೂರು ಸಂತೆ ಬಗ್ಗೆ ಆಗಾಗ್ಗೆ ಬರುವ ವರದಿ ಹಾಗೂ ಕೆಲವು ಬರಹಗಳ ಬಗ್ಗೆ ಒಂದು ಅನಿಸಿಕೆ ವ್ಯಕ್ತಪಡಿಸುತ್ತಿದ್ದೇನೆ. ಪುತ್ತೂರಿನಲ್ಲಿ ಹೇಳಿಕೇಳಿ ಕಿರಿದಾದ ರಸ್ತೆಗಳು  ಎರಡು ವಾಹನ ಎದುರು ಬದುರು ಬಂದರೆ ಜನ ಅಂಗಡಿ ಬಾಗಿಲಲ್ಲಿ ನಿಲ್ಲಬೇಕು. ಕೆಲವು ಕಡೆ ಅಂಗಡಿ ಜಗಲಿಯಲ್ಲಿ ಸಂಚರಿಸುವ ಸ್ಥಳಗಳು ಇದೆ  ಸಾಮಾನ್ಯ ಜನರು ಪಡುವ ಪಾಡು ಅಷ್ಟಿಷ್ಟಲ್ಲ  ಇಂತಹ ಸ್ಥಿತಿಯಲ್ಲಿ ಸೋಮವಾರ ದಿನ ಕೋರ್ಟ್ ಕಚೇರಿಗೆ ಬರುವ ಸಾಮಾನ್ಯ ಜನರು ರಸ್ತೆಯಲ್ಲಿ ರಸ್ತೆಯ ಮಧ್ಯಭಾಗದ ತನಕ ತರಕಾರಿ ರಾಶಿ ಹಾಕಿ ಮಾರುತ್ತಾರೆ. ಉಳ್ಳವರು ಅದೇ ರಸ್ತೆಯಲ್ಲಿ ತಮ್ಮ ವಾಹನ ನಿಲ್ಲಿಸಿ ತರಕಾರಿ ಖರೀದಿಸಿ ನಂತರ ಮುಂದುವರಿಯುವುದು ಸಾಮಾನ್ಯ
ಇದು ಈ ಹಿಂದೆ ಸಂತೆ ಇದ್ದ ಕೋರ್ಟ್ ರಸ್ತೆ ಹಾಗೂ ಕೋರ್ಟ್ ಮೈದಾನದ ಕಚೇರಿಗಳ ನಾಲ್ಕು ರಸ್ತೆಗಳ ಕತೆ. ಆಸ್ಪತ್ರೆಗೆ ಬರುವ ಬಡ ರೋಗಿಗಳು ಹೇಗೂ ಬಂದದ್ದಾಯಿತು. ಒಮ್ಮೆ ಮನೆ ತಲುಪಿದರಾಯ್ತು ಎಂದು ವಿಧಿಗೆ ಬಯ್ಯುತ್ತ ಸಾಗುತ್ತಾರೆ  ಇಲ್ಲ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸ್ಥಿತಿ ಇರುವಾಗ ಕೆಲ ರಾಜಕಾರಣಿಗಳು, ಪತ್ರಕರ್ತರು ಪದೇ ಪದೇ ಸಂತೆ ಮೊದಲಿದ್ದಲ್ಲಿಗೆ ಬರಲಿ ಎಂದು ಒತ್ತಾಯಿಸುವುದು ಪರಮಾಶ್ಚರ್ಯ
ಚುನಾವಣೆ ಬಂದಾಗ ಸುಂದರ ಪುತ್ತೂರನ್ನು ಮಾಡುತ್ತೇವೆ ಎಂದಿದ್ದರು. ತರಕಾರಿ ಸಂತೆ ಮಾರ್ಗದಲ್ಲಿರುವುದು ಸುಂದರವೇ ? ಸಂತೆ ಮರುದಿನ ಮೈದಾನ ಹಾಗೂ ರಸ್ತೆ ಕೊಳೆತ ತರಕಾರಿಗಳಿಂದ ನಾರುವುದು ಸುಂದರವೇನು   ಅಷ್ಟಕ್ಕೂ ಸಂತೆ ನಿಜವಾಗಿ ಸಂತೆ ಎಲ್ಲಿರಬೇಕೋ ಅಲ್ಲಿಗೆ ಹೋಗಿದೆ. ಮಾರಾಟಗಾರರಿಗೆ ಯಾವುದೇ ನಯಾ ಪೈಸೆ ಖರ್ಚಿಲ್ಲ. ಯಾವುದೇ ಬಾಡಿಗೆ ಇಲ್ಲ  ತರಕಾರಿ ಮಾರಬಹುದಾದ ಅತ್ಯುತ್ತಮ ಪ್ರಶಾಂತ ಸ್ಥಳ ಎಪಿಎಂಸಿ ಯಾರ್ಡ್
ಪುತ್ತೂರನ್ನು ಸ್ಮಾರ್ಟ್ ಸಿಟಿ ಮಾಡುವ ಸಾಮಾನ್ಯ ಜನರ ಮೂಗಿಗೆ ಬೆಣ್ಣೆ ಒರೆಸಿ ಮಂಗ ಮಾಡುವ ರಾಜಕಾರಣಿಗಳಿಗೆ ಸಂತೆ ಮತ್ತೆ ಪುತ್ತೂರಿಗೆ ಬಂದು ನಗರವಿಡೀ ಸಂತೆಯಾಗಬೇಕಿದೆ  ಇಷ್ಟಕ್ಕೂ ಯಾವ ಸಾರ್ವಜನಿಕರೂ ಸಂತೆ ಮೊದಲಿದ್ದಲ್ಲಿಗೆ ಬರಲೆಂದು ಕೇಳಿಲ್ಲ ಅಥವಾ ಒತ್ತಾಯಿಸಿಲ್ಲ ಮುಷ್ಕರ ನಡೆಸಿಲ್ಲ  ಆದ್ದರಿಂದ ಸಂತೆ ನಗರಕ್ಕೆ ಬರುವುದೇ ಬೇಡ

ವಿವೇಕಾನಂದ ಭಟ್  ಪುತ್ತೂರು