ಎಪಿಎಲ್ ಚೀಟಿದಾರರಿಗೂ ಬಿಪಿಎಲ್ ಸೌಲಭ್ಯ ಸಿಗಲಿ

ಆನ್‍ಲೈನ್ ಮೂಲಕ ಅರ್ಜಿ ಪಾವತಿಸಿ 15 ದಿನದೊಳಗಾಗಿ ಎಪಿಎಲ್ ಪಡಿತರ ಚೀಟಿ ಪಡೆಯಬಹುದೆಂದು ಮಾನ್ಯ ಆಹಾರ ಸಚಿವರು ತಿಳಿಸಿರುವುದರಿಂದ ಇನ್ಮುಂದೆ ಎಪಿಎಲ್ ಪಡಿತರ ಚೀಟಿ ಪಡೆಯುವುದು ಸುಲಭ ಸಾಧ್ಯವಾಗಲಿದೆ  ಆದರೆ ಎಪಿಎಲ್ ಪಡಿತರ ಚೀಟಿ ಪಡೆದಿಟ್ಟುಕೊಂಡರೂ ಪಡಿತರದಾರರಿಗೆ ಅದರಿಂದ ಯಾವ ರೀತಿ ಸೌಲಭ್ಯ ದೊರೆಯುತ್ತದೆಂಬ ಬಗ್ಗೆ ಎಲ್ಲೂ ಸೃಷ್ಟೀಕರಣ ಇಲ್ಲವಾದ್ದರಿಂದ ಜನರಲ್ಲಿ ಗೊಂದಲವಿದೆ  ಈಗಾಗಲೇ ಬಿಪಿಎಲ್ ಕಾರ್ಡ್‍ದಾರರಿಗೆ ಪಡಿತರದೊಂದಿಗೆ ಆಯ್ದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ  ಬಿಪಿಎಲ್ ಪಡಿತರದಾರರಿಗೆ ದೊರೆಯುವ ಸೌಲಭ್ಯಗಳಲ್ಲಿ ಕೆಲವಾದರೂ ಎಪಿಎಲ್ ಪಡಿತರದಾರರಿಗೆ ದೊರೆಯುವಂತಾಗಲಿ ಬದಲಿಗೆ ಎಪಿಎಲ್ ಪಡಿತರ ಚೀಟಿ ಕೇವಲ ವಿಳಾಸದ ಪುರಾವೆಯಾದರೆ ಅದನ್ನು ಪಡೆದಿಟ್ಟುಕೊಂಡು ಏನು ಪ್ರಯೋಜನ

  • ಎಸ್ ಎಮ್ ಪುತ್ತೂರು