ಇಲ್ಲಿ ಮೀನು ವ್ಯಾಪಾರ ಯಾರೂ ಮಾಡಬಹುದು

ಈಗಿನ ಕಾಲದಲ್ಲಿ ಯಾವ ಕೆಲಸವನ್ನು ಯಾರು ಬೇಕಾದರೂ ಹೇಗೆ ಬೇಕಾದರೂ ಮಾಡಬಹುದು ಮೊಗವೀರರು ಮಾತ್ರ ಮೀನು ಮಾರಬಹುದು ಎಂದು ಹೇಳುವ ಅಧಿಕಾರ ಅವರಿಗಿಲ್ಲ ಕೆಲವರು ಮೀನು ಮಾರ್ಕೆಟಿನಲ್ಲಿ ಮೀನು ತಂದು ಮಾರುತ್ತಾರೆ ಇನ್ನು ಕೆಲವರು ಮನೆ ಮನೆಗೆ ಮೀನು ಹೊತ್ತು ಕೊಂಡು ಬಂದು ಮಾರುತ್ತಾರೆ ಮತ್ತೆ ಕೆಲವರು ಬೈಕಿನಲ್ಲಿ ಇನ್ನು ಕೆಲವರು ಸೈಕಲಿನಲ್ಲಿ ಇನ್ನು ಕೆಲವರು ಸ್ಕೂಟರ್ ಟೆಂಪೋಗಳಲ್ಲಿ ಮೀನು ತಂದು ಮಾರುತ್ತಾರೆ ಹೀಗೆ ಮಾರಬಾರದೆಂದು ಹೇಳಲು ಯಾರಿಗೂ ಅಧಿಕಾರ ಇಲ್ಲ ಅಂಗಡಿ ಇಟ್ಟು ಬೈಕ್ ಸ್ಕೂಟರಿನಲ್ಲಿ ಮಾರುವವರು ಮೀನು ಸ್ವಲ್ಪ ಅಗ್ಗದಲ್ಲಿ ಕೊಡುತ್ತಾರೆ ಇಷ್ಟೊಂದು ಅಗ್ಗದಲ್ಲಿ ಕೊಡುವುದಕ್ಕೆ ಮೀನುಗಾರರು ಆಕ್ಷೇಪವೆತ್ತುತ್ತಿದ್ದಾರೆ ಹೀಗೆ ಹಲವಾರು ಜನರು ತರಕಾರಿ ಹಣ್ಣು ಹಂಪಲು ಮತ್ತು ಬಟ್ಟೆಗಳು ಪಾತ್ರೆಗಳನ್ನು ಮನೆ ಮನೆಗೆ ತಂದು ಮಾರುತ್ತಾರೆ ಇದಕ್ಕೆ ಯಾರೂ ವಿರೋಧ ಮಾಡಬಾರದು ಈಗ ಸರಕಾರದಿಂದ ಮೊಗವೀರರಿಗೆ ಎಲ್ಲಾ ತರದ ಸಬ್ಸಿಡಿ ಕಡಿಮೆ ಬಡ್ಡಿಯಲ್ಲಿ ಬ್ಯಾಂಕ್ ಲೋನ್ ಎಲ್ಲ ಸುಲಭದಲ್ಲಿ ಅವರಿಗೆ ಸಿಗುತ್ತದೆ ಮೊಗವೀರ ಸಮುದಾಯದವರ ಶೇಕಡ 90 ಜನರು ಬಹಳ ಶ್ರೀಮಂತರು ಹಾಗಾಗಿ ಬೇರೆ ಜಾತಿಯವರು ಮೀನು ಮಾರುವಾಗ ಅವರಿಗೆ ಪೊಲೀಸರಾಗಲಿ ಇತರ ಅಧಿಕಾರ ವರ್ಗದವರಾಗಲೀ ಉಪದ್ರ ಕೊಡಬಾರದು ಅವರು ತಮ್ಮ ಸಂಸಾರ ಸಾಗಿಸಲು ಅನುವು ಮಾಡಿಕೊಡಿರಿ ಇನ್ನು ಸ್ವಲ್ಪ ಸಮಯದ ನಂತರ ಮೊಗವೀರರು ಗಲಾಟೆ ಮಾಡಿ ಮೊಗವೀರರು ಮಾತ್ರ ಬೋಟ್ ಖರೀದಿಸಿ ಫಿಶಿಂಗ್ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲೂಬಹುದು ಈಗ ಏನಾಗಿದೆ ಅಂದರೆ ನಮ್ಮಲ್ಲಿ ಸಾಧಾರಣ 500 ಬೋಟ್ ಸಾಕಾಗುವುದಿದ್ದರೆ ನಮ್ಮಲ್ಲಿ 5000 ಬೋಟಿನವರು ಮೀನು ಹಿಡಿಯಲು ಹೋಗುತ್ತಾರೆ ಹೀಗಾಗಿ ಕೆಲವರಿಗೆ ಮೀನು ಸಿಗುತ್ತದೆ ಕೆಲವರಿಗೆ ಇಲ್ಲ ಇದಕ್ಕೆ ಬೇಕಾಗಿ ಮೀನುಗಾರರು ಮೀನು ಹಿಡಿಯುವುದನ್ನು ನೆಚ್ಚಿ ಕುಳಿತುಕೊಳ್ಳದೆ ಬೇರೆ ಕೆಲಸಕ್ಕೆ ಹೋಗಿ ಹಣ ಸಂಪಾದಿಸಬೇಕು ಈಗಿನ ಪರಿಸ್ಥಿತಿ ಹೇಗೆ ಅಂದರೆ ಹಲವಾರು ಮನೆಗಳಲ್ಲಿ ಹಿರಿಯ ನಾಗರಿಕರು ಇರುವುದು ಅವರಿಗೆ ಫಿಶ್ ಮಾರ್ಕೆಟ್ ವೆಜ್ ಮಾರ್ಕೆಟಿಗೆ ಹೋಗಲು ಆಗದ ಕಾರಣ ನಿತ್ಯವೂ ಮನೆ ಮುಂದೆ ಬಂದು ಮೀನು ಮತ್ತು ತರಕಾರಿ ಹಣ್ಣು ಹಂಪಲುಗಳನ್ನು ಅವರಿಂದ ಖರೀದಿಸುತ್ತಾರೆ ಇಂತಹ ಪದ್ಧತಿಗಳನ್ನು ಯಾರು ಅದಕ್ಕೆ ತಡೆಹಾಕಬಾರದು

  • ಕೆ ಆರ್ ಪ್ರಸಾದ್ ಉಡುಪಿ