ಕತ್ರೀನಾ ನನಗಿಷ್ಟ : ಅನುಷ್ಕಾ

ಬಾಲಿವುಡ್ಡಿನಲ್ಲಿ ನಟೀಮಣಿಯರ ನಡುವೆ ಕ್ಯಾಟ್ ಫೈಟ್ ನಡೆಯುವುದೇ ಹೆಚ್ಚು. ಅಂತದ್ದರಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ನಡುವೆ ಭಾರೀ ಒಳ್ಳೆಯ ಸ್ನೇಹವಿದೆ. ಕತ್ರೀನಾ ಎಂದರೆ ನನಗೆ ತುಂಬಾ ಇಷ್ಟವೆಂದು ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.

ಅನುಷ್ಕಾ ಕತ್ರೀನಾ ಜೊತೆ ಯಶ್ ಚೋಪ್ರಾರ `ಜಬ್ ತಕ್ ಹೇ ಜಾನ್’ ಚಿತ್ರದಲ್ಲಿ ನಟಿಸಿದ್ದಳು. ಈಗ ಮತ್ತೆ ಆನಂದ್ ಎಲ್ ರೈ ಚಿತ್ರದಲ್ಲಿ ಅವರಿಬ್ಬರೂ ಜೊತೆಯಾಗುತ್ತಿದ್ದಾರೆ. ವಿಶೇಷವೆಂದರೆ ಈ ಎರಡೂ ಚಿತ್ರಗಳಲ್ಲಿ ಶಾರೂಕ್ ಖಾನ್ ಹೀರೋ. ಶಾರೂಕ್ ಹೊಸ ಚಿತ್ರದಲ್ಲಿ ಕುಬ್ಜನಾಗಿ ಕಾಣಿಸಿಕೊಳ್ಳಲಿದ್ದಾನೆ. ಕತ್ರೀನಾ ಹಾಗೂ ಶಾರೂಕ್ ಜೊತೆ ಮತ್ತೆ ಒಂದಾಗುತ್ತಿರುವುದರ ಬಗ್ಗೆ ಎಕ್ಸೈಟಿನಿಂದಲೇ ಮಾತಾಡುತ್ತಾಳೆ ಅನುಷ್ಕಾ. “ಕತ್ರೀನಾ ಬಗ್ಗೆ ನನಗೆ ಒಂದು ರೀತಿಯ ಬಾಂಡಿಂಗ್ ಬೆಳೆಯುತ್ತಿದೆ. ಆಕೆ ಜೊತೆ ಕೆಲಸ ಮಾಡುವುದು ಖುಶಿಯಾಗಿದೆ” ಎನ್ನುತ್ತಾಳೆ.

ಕತ್ರೀನಾ ಜೊತೆ ಆಲಿಯಾ ಭಟ್ ಕೂಡಾ ಸ್ನೇಹದಿಂದಿದ್ದಾಳೆ. ಆದರೆ ದೀಪಿಕಾ ಮತ್ತು ಕತ್ರೀನಾ ಮಾತ್ರ ಮುಖ ಮುಖ ನೋಡಿಕೊಳ್ಳುವುದಿಲ್ಲ.