18 ವರ್ಷ ಬಳಿಕ ನಗರದಲ್ಲಿ ರೌಡಿ ನಿಗ್ರಹ ದಳ ರಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರಿನಲ್ಲಿ 18 ವರ್ಷಗಳ ಹಿಂದೆ ಇದ್ದ ರೌಡಿ ನಿಗ್ರಹ ದಳವನ್ನು ಮತ್ತೆ ಮಂಗಳೂರು ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಥಾಪಿಸಲು ಮಹತ್ವದ ತೀರ್ಮಾನವನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಅದರಲ್ಲೂ ಈ ಬಾರಿ ಎರಡು ರೌಡಿ ನಿಗ್ರಹ ದಳಗಳನ್ನು ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ.

ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತೆ ಹೆಚ್ಚುತ್ತಿರುವ ರೌಡಿಗಳ ಅಟ್ಟಹಾಸವನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಕಾರ್ಯೊನ್ಮುಖವಾಗಿದ್ದು, ಇತ್ತೀಚಿಗೆ ನಡೆದ ಕೊಲೆ, ದಾಂದಲೆ, ಕೋಮುಗಲಭೆಗಳಲ್ಲಿ ಈ ಎಲ್ಲಾ ರೌಡಿಗಳೂ ಶಾಮೀಲಾಗಿರುವುದು ಖಚಿತಗೊಂಡಿದೆ. ಹೀಗಾಗಿ ಇಂತದ್ದೊಂದು ತೀರ್ಮಾನಕ್ಕೆ ಇಲಾಖೆ ಬಂದಿದೆ.

ದಕ್ಷಿಣ ಹಾಗೂ ಉತ್ತರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ಹೀಗೆ ಎರಡು ಪ್ರತ್ಯೇಕ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ. ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ ಸೇರಿದಂತೆ ಮಂಗಳೂರು ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ಎಸಿಪಿ ರಾಮ ರಾವ್ ನೇತೃತ್ವದಲ್ಲಿ ಎಂಟು ಮಂದಿ ಪೆÇಲೀಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ರೌಡಿ ನಿಗ್ರಹ ದಳವನ್ನು ಎರಡು ದಿನಗಳ ಹಿಂದೆ ರಚಿಸಲಾಗಿದೆ. ಪಣಂಬೂರು, ಸುರತ್ಕಲ್, ಮುಲ್ಕಿ, ಬಜಪೆ, ಮೂಡಬಿದಿರೆ, ಮಂಗಳೂರು ಗ್ರಾಮಾಂತರ, ಕಾವೂರು ಸೇರಿದಂತೆ ಉತ್ತರ ಉಪ ವಿಭಾಗದಲ್ಲಿ ಎಸಿಪಿ ರಾಜೇಂದ್ರ ಡಿ ಎಸ್ ನೇತೃತ್ವದಲ್ಲಿ ಇನ್ನೊಂದು ರೌಡಿ ನಿಗ್ರಹ ದಳ ಅಸ್ತಿತ್ವಕ್ಕೆ ಬರಲಿದೆ. ಆದರೆ ಸೆಂಟ್ರಲ್ ಉಪ ವಿಭಾಗ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ದಳ ಸ್ಥಾಪಿಸುವ ಚಿಂತನೆ ಸದ್ಯಕ್ಕೆ ಪೆÇಲೀಸ್ ಇಲಾಖೆ ಮುಂದಿಲ್ಲ.

ಜಿಲ್ಲೆಯಲ್ಲಿ  ಸೆಪ್ಟೆಂಬರ್ 26ರಿಂದ ಅಕ್ಟೋಬರ್ 4ರವರೆಗೆ ಅಂದರೆ ಕಳೆದ ಒಂದು ವಾರದ ಅವಧಿಯಲ್ಲಿ ರೌಡಿಗಳ ಅಟ್ಟಹಾಸ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಮೂವರು ಬಲಿಯಾಗಿದ್ದಾರೆ. ಫರಂಗಿಪೇಟೆಯಲ್ಲಿ ಸೆಪ್ಟೆಂಬರ್ 26ರಂದು ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಅಕ್ಟೋಬರ್ 4ರಂದು ರೌಡಿಗಳು ಅಟ್ಟಹಾಸ ಮೆರೆದಿದ್ದರು. ಹೀಗಾಗಿ ಪೆÇಲೀಸ್ ಆಯುಕ್ತ ಟಿ ಆರ್ ಸುರೇಶ್ ರೌಡಿ ನಿಗ್ರಹ ದಳ ರಚನೆ ಮಾಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.

ರೌಡಿಗಳನ್ನು ಮಟ್ಟಹಾಕುವುದೇ ಇದರ ಮೂಲ ಉದ್ದೇಶ ಎಂದು ಟಿ ಆರ್ ಸುರೇಶ್ ಹೇಳಿದ್ದಾರೆ.