ಅಮೆರಿಕದಲ್ಲಿ ಭಾರತೀಯ ಗುಂಡೇಟಿಗೆ ಬಲಿ

ವಾಷಿಗ್ಟಂನ್ : ಇಲ್ಲಿ ಗುರುವಾರದಂದು 26 ವರ್ಷದ ಭಾರತೀಯ ವ್ಯಕ್ತಿಯೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ.  ಅಂಗಡಿಯೊಂದಕ್ಕೆ ದರೋಡೆಗಾಗಿ ನುಗ್ಗಿದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ವಿಕ್ರಂ ಜರ್ಯಾಲರನ್ನು ಗುಂಡಿಟ್ಟು ಸಾಯಿಸಿದ್ದಾರೆ. ಅಂಗಡಿಯಲ್ಲಿ ಕ್ಲರ್ಕಾಗಿ ಕೆಲಸ ಮಾಡುತ್ತಿದ್ದ ವಿಕ್ರಂ ಪಂಜಾಬಿನ ಹೋಶಿಯಾರ್ಪುರ ವ್ಯಕ್ತಿಯಾಗಿದ್ದಾರೆ. ದರೋಡೆಕೋರರಿಗೆ ಹಣ ನೀಡಿದರೂ, ಅವರಲ್ಲೊಬ್ಬ ವಿಕ್ರಂ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಆತ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.