ಟ್ರಂಪ್ ತಂಡಕ್ಕೆ ಇನ್ನೊಬ್ಬ ಭಾರತೀಯ ಮಹಿಳೆ ಸೇರ್ಪಡೆ

ಸೀಮಾ ವರ್ಮ

ವಾಷಿಂಗ್ಟನ್ : ಅಮೆರಿಕಾ ದೇಶದ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಚಿಸುತ್ತಿರುವ ಕನಸಿನ ತಂಡಕ್ಕೆ ಮಂಗಳವಾರ ಇನ್ನೊಬ್ಬರು ಭಾರತೀಯ ಅಮೆರಿಕನ್ ಮಹಿಳೆಯನ್ನು ನೇಮಿಸಲಾಗಿದೆ. “ಡಾ ಸೀಮಾ ವರ್ಮ ಅವರನ್ನು ಸೆಂಟರ್ಸ್ ಫಾರ್ ಮೆಡಿಕೇರ್ ಎಂಡ್ ಮೆಡಿಕೇಡ್ ಸರ್ವಿಸಸ್ ಇದರ  ಅಡ್ಮಿನಿಸ್ಟ್ರೇಟರ್ ಆಗಿ ನೇಮಿಸಲು ನಾನು ಸಂತೋಷಿಸುತ್ತೇನೆ” ಎಂದು ಟ್ರಂಪ್ ಬಿಡುಗಡೆಗೊಳಿಸಿರುವ ಹೇಳಿಕೆಯೊಂದು ತಿಳಿಸಿದೆ.

ಡಾ ವರ್ಮ ಅವರು ಪ್ರಸಕ್ತ  ರಾಷ್ಟ್ರೀಂiÀi ಆರೋಗ್ಯ ನೀತಿ ಸಂಬಂಧ ಕನ್ಸಲ್ಟಿಂಗ್ ಸಂಸ್ಥೆಯಾಗಿರುವ ಎಸ್ ವಿ ಸಿ ಇದರ ಸಿ ಇ ಒ ಹಾಗೂ ಸ್ಥಾಪಕಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಅಮೆರಿಕನ್ ಮಹಿಳೆ ನಿಕ್ಕಿ ಹ್ಯಾಲಿ ಅವರನ್ನು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯನ್ನಾಗಿ ಟ್ರಂಪ್ ನೇಮಿಸಿದ್ದರು.