ವಂಚಕ ಜ್ಯೋತಿಷಿ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ರಾಮಕೃಷ್ಣ ಶರ್ಮ

ಮಂಗಳೂರು : ನಗರದ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿ ಸಿಕ್ಕಿಬಿದ್ದಿದ್ದ ವಂಚಕ ಜ್ಯೋತಿಷಿ ರಾಮಕೃಷ್ಣ ಶರ್ಮನ ಮತ್ತೊಂದು ಕಪಟ ವಂಚನೆ ಕೃತ್ಯ ಬಯಲಾಗಿದೆ.
ಯುವತಿಯೋರ್ವಳಿಗೆ ಹಿಡಿದ ಪ್ರೇಮ ಪ್ರಕರಣವನ್ನು ಬಿಡಿಸುವುದಾಗಿ ಹೇಳಿ ಆಕೆಯಿಂದ ಸುಮಾರು 2,10,000 ರೂ ನಗದು ದೋಚಿರುವುದು ಇದೀಗ ಬೆಳಕಿಗೆ ಬಂದಿದೆ. ಜೊತೆಗೆ ಇದಕ್ಕೆ ಇನ್ನಷ್ಟು ಹೋಮ ಹವನ ಮಾಡಬೇಕು ಎಂತ ಹೇಳಿ ಮತ್ತೊಮ್ಮೆ 1,50,000 ರೂ ಲಕ್ಷ ಹಣ ಪಡೆದು ಯುವತಿಗೆ ಪಂಗನಾಮ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಅತ್ತಾವರದಲ್ಲಿ ವೈಷ್ಣವಿ ಜ್ಯೋತಿಷ್ಯಾಲಯ ಎಂಬ ಹೆಸರಿನಲ್ಲಿ
ಜ್ಯೋತಿಷ್ಯ ಸೆಂಟರ್ ಆರಂಭಿಸಿದ್ದ ರಾಮಕೃಷ್ಣ ಶರ್ಮಾ ಹಲವು ಮಂದಿಗೆ ವಂಚನೆ ಮಾಡಿರುವುದನ್ನು ನರೇಂದ್ರ ನಾಯಕ್ ಅವರು ಸ್ಟಿಂಗ್ ಆಪರೇಷನ್ ಮೂಲಕ ಬಹಿರಂಗ ಮಾಡಿದ್ದರು. ಬಳಿಕ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.
ರಾಮಕೃಷ್ಣ ಶರ್ಮಾನ ವಿರುದ್ಧ ಸುಮಾರು 15 ವಂಚನೆ ಪ್ರಕರಣಗಳನ್ನು ಈಗಾಗಲೇ ಪಾಂಡೇಶ್ವರ ಠಾಣಾ ಪೊಲೀಸರು ದಾಖಲಿಸಿದ್ದಾರೆ. ಜಾಮೀನು ಪಡೆದು ಹೊರ ಬಂದಿದ್ದ ವಂಚಕ ಶರ್ಮಾ ಬಳಿಕ ನಾಪತ್ತೆಯಾಗಿದ್ದಾನೆ. ಪೆÇಲೀಸರು ಇದೀಗ ಈತನ ಪತ್ತೆಗೆ ಪ್ರತ್ಯೇಕ ತಂಡ ರಚಿಸಿದ್ದಾರೆ. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.