ಐಎಸ್ಐ ಹನಿ ಟ್ರ್ಯಾಪ್ ಪ್ರಕರಣ : ಇನ್ನೊಬ್ಬ ಸೇನಾಧಿಕಾರಿ ವಶಕ್ಕೆ

ನವದೆಹಲಿ : ರಾಜಧಾನಿಯ ಸೇನಾ ಮುಖ್ಯ ಕಾರ್ಯಾಲಯದ ಅಧಿಕಾರಿಗಳ ತಂಡವೊಂದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಒಬ್ಬರನ್ನು  ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾದರೂ ಈ ಅಧಿಕಾರಿಯು ಪಾಕಿಸ್ತಾನದ ಐಎಸ್‍ಐ ನಡೆಸುತ್ತಿರುವ ಹನಿ ಟ್ರ್ಯಾಪ್ ಜಾಲಕ್ಕೆ ಬಿದ್ದಿರಬಹುದೆಂಬ ಸಂದೇಹವಿದೆಯೆನ್ನಲಾಗಿದೆ. ಭಾರತೀಯ ವಾಯು ಸೇನೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಅರುಣ್ ಮಾರ್ವಾಹ್ ಅವರನ್ನು ಇತ್ತೀಚೆಗೆ ಗೂಢಚರ್ಯೆ ಆರೋಪದಲ್ಲಿ ವಶಕ್ಕೆ ಪಡೆದುಕೊಂಡು  ವಿಚಾರಣೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

LEAVE A REPLY