ಬೈಕ್ ಸವಾರನ ಅಪಹರಿಸಿ ತಲೆ ಬೋಳಿಸಿ ಮರಳಿನಲ್ಲಿ ಹೂತಿಟ್ಟ ಇನ್ನೊಬ್ಬ ಆರೋಪಿ ಬಂಧನ

ನಮ್ಮ ಪ್ರತಿನಿಧಿ ವರದಿ

 ಮಂಜೇಶ್ವರ : ಬೈಕ್ ಸವಾರನನ್ನು ಅಪಹರಿಸಿ ಕಡಲ ಕಿನಾರೆಗೆ ಕೊಂಡೊಯ್ದು, ತಲೆ ಕೂದಲು, ಮೀಸೆ ಬೋಳಿಸಿ ಬಳಿಕ ಹಲ್ಲೆಗೈದು ಗಂಭೀರವಾಗಿ ಗಾಯಗೊಳಿಸಿದ ನಂತರ ಮರಳಿನಲ್ಲಿ ಕುತ್ತಿಗೆತನಕ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ.

ಮಣಿಮುಂಡ ನಿವಾಸಿ ಫಾರೂಕ್ (29) ಬಂಧಿತ ಆರೋಪಿ. ಸೆರೆಗೀಡಾದ ಫಾರೂಕ್ ಉಪ್ಪಳದ ಕುಖ್ಯಾತ ಗೂಂಡಾ ಖಾಲಿಯಾ ರಫೀಕನ ಕಾರು ಚಾಲಕನಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

ಒಂದು ತಿಂಗಳಿನ ಹಿಂದೆ ಮಣ್ಣಂ ಕುಝಿ ಮೈದಾನದಲ್ಲಿ ರವೂಪನನ್ನು ಹಲ್ಲೆಗೈದು ಗಾಯಗೊಳಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮಣಿಮುಂಡ ನಿವಸಿ ಅಬ್ದುಲ್ಲ ಹಾಗೂ  ಅಪ್ರಾಪ್ತ 17 ವರ್ಷ ಪ್ರಾಯದ ಯುವಕನೊಬನನ್ನು  ಪೆÇಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇನ್ನೂ ಹಲವರನ್ನು ಕೇಂದ್ರೀಕರಿಸಿ ಪೆÇಲೀಸರು ತನಿಖೆ ನಡೆಸುತಿದ್ದಾರೆ.