ದ ಕ ಎಸ್ಪಿಯಾಗಿ ವರ್ಗಾವಣೆ ಸುದ್ದಿ ಅಣ್ಣಾಮಲೈ ನಿರಾಕರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಖಡಕ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ ಎನ್ನುವ ಸುದ್ದಿ ವಾಟ್ಸಪ್, ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ವೈರಲ್ ಆಗಿದೆ. ಆದರೆ ಜಿಲ್ಲಾ ಎಸ್ಪಿಯಾಗಿ ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಯಾರಿಂದಲೂ ಸೂಚನೆ ಬಂದಿಲ್ಲ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಮತ್ತು ಸಚಿವ ರೈ ಅವರು ಬಂಟ್ವಾಳದಲ್ಲಿ ಎಸ್ಪಿ ಗುಲಾಬ್‍ರಾವ್ ಬೊರಸೆ ಅವರನ್ನು ತರಾಟೆಗೆತ್ತಿಕೊಂಡಿರುವ ಪ್ರಕರಣಗಳನ್ನು ಗಮನಿಸಿದರೆ ಈ ಸುದ್ದಿ ಸತ್ಯ ಇರಬಹುದೇ ಎನ್ನುವ ಗುಮಾನಿ ಎಲ್ಲರಲ್ಲೂ ಹುಟ್ಟುಕೊಂಡಿತ್ತು.