`ಮಿ ಇಂಡಿಯಾ 2’ಗೆ ಶ್ರೀ-ಅನಿಲ್ ರೆಡಿ

`ಮಿಸ್ಟರ್ ಇಂಡಿಯಾ’ ಸಮೇತ ಹಲವು ಚಿತ್ರಗಳಲ್ಲಿ ಮೋಡಿ ಮಾಡಿದ್ದ ಶ್ರೀದೇವಿ ಹಾಗೂ ಅನಿಲ್ ಕಪೂರ್ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಜನಪ್ರಿಯ ಜೋಡಿ `ಮಿಸ್ಟರ್ ಇಂಡಿಯಾ-2′ ದಲ್ಲಿ ಮತ್ತೆ ಒಂದಾಗುವುದು ಪಕ್ಕಾ ಆಗಿದೆಯಂತೆ.

ಸದ್ಯ ಶ್ರೀದೇವಿ ಜುಲೈ 7ಕ್ಕೆ ರಿಲೀಸ್ ಆಗುತ್ತಿರುವ ಆಕೆ ಪ್ರಮುಖ ಪಾತ್ರದಲ್ಲಿ ನಟಿಸಿರುವ `ಮಮ್’ ಚಿತ್ರದ ಪ್ರಮೋಶನ್ನಿನಲ್ಲಿ ಬ್ಯೂಸಿಯಾಗಿದ್ದಾಳೆ. ಅದಾದ ಬಳಿಕ `ಮಿ ಇಂಡಿಯಾ 2′ ಚಿತ್ರಕ್ಕೆ ಚಾಲನೆ ಸಿಗಲಿದೆ ಎನ್ನಲಾಗಿದೆ. ಈ ಮೊದಲೂ `ಮಿ ಇಂಡಿಯಾ 2′ ಚಿತ್ರದ ಬಗ್ಗೆ ಸುದ್ದಿ ಇತ್ತಾದರೂ ಸರಿಯದ ಸ್ಕ್ರಿಪ್ಟ್ ಸಿಗದ ಕಾರಣ ಅದು ಇನ್ನುವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಮೂಲಗಳ ಪ್ರಕಾರ ಮೊದಲ ಚಿತ್ರದ ಮುಂದುವರಿದ ಸಿನಿಮಾಗಾಗಿ ಒಳ್ಳೆಯ ಕಥಾವಸ್ತು ಸಿಕ್ಕಿದೆಯಂತೆ. ಚಿತ್ರದಲ್ಲಿ ಅನಿಲ್ ಕಪೂರ್-ಶ್ರೀದೇವಿಯಲ್ಲದೇ ಯುವಜೋಡಿಯೊಂದನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ತೆಗೆದುಕೊಳ್ಳುವ ಇರಾದೆ ಇದೆಯಂತೆ. ಈ ಪಾತ್ರಕ್ಕೆ ಯಾವ ಹೀರೋ-ಹಿರೋಯಿನ್ ಆಯ್ಕೆಯಾಗುತ್ತಾರೆ ನೋಡಬೇಕಿದೆ.

ಈ ಚಿತ್ರವನ್ನು ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅಥವಾ `ಮಮ್’ ಡೈರೆಕ್ಟರ್ ರವಿ ಉದ್ಯಾವರ್ ನಿರ್ದೇಶಿಸುವ ಸಾಧ್ಯತೆ ಇದೆ.