ಮೊದಲ ಬಾರಿಗೆ ಚಿಕ್ಕಪ್ಪ ಅನಿಲ್ ಜೊತೆ ನಟಿಸುತ್ತಿರುವ ಅರ್ಜುನ್

ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಮೊದಲ ಬಾರಿಗೆ ಚಿಕ್ಕಪ್ಪ ಅನಿಲ್ ಕಪೂರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾನೆ. ಅನೀಜ್ ಬಾಜ್ಮಿ ನಿರ್ದೇಶನದ `ಮುಬಾರಕನ್’ ಸಿನಿಮಾದಲ್ಲಿ ಈ ಕಪೂರದ್ವಯರು ನಟಿಸುತ್ತಿದ್ದಾರೆ.

ಸಿನಿಮಾದ ಹೆಚ್ಚಿನ ಶೂಟಿಂಗ್ ಲಂಡನ್ನಿನಲ್ಲಿ ನಡೆದಿದ್ದು ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಅರ್ಜುನ್ ಹಾಗೂ ಅನಿಲ್ ಈ ಸಿನಿಮಾದ ಶೂಟಿಂಗಿನಲ್ಲಿ ಬಹಳ ಮೋಜು ಮಸ್ತಿ ಮಾಡಿದ್ದು ಬಹಳಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.

ಚಿತ್ರದಲ್ಲಿ ಇವರ ಜೊತೆಗೆ ಇಲಿಯಾನಾ ಡಿ ಕ್ರೂಜ್, ಅತಿಯಾ ಶೆಟ್ಟಿ, ನೇಹಾ ಶರ್ಮಾ ಮೊದಲಾದವರು ನಟಿಸಿದ್ದಾರೆ. ಚಿತ್ರ ಜುಲೈ 28ರಂದು ತೆರೆಗೆ ಬರಲಿದೆ.