ಅಂಪೈರ್ ವಿರುದ್ಧ ಕೋಪಕ್ಕೆ 4 ಬಾಲುಗಳಲ್ಲಿ 92 ರನ್ನು ಕೊಟ್ಟ ಬಾಂಗ್ಲಾ ಬೌಲರ್ !

ಬಾಂಗ್ಲಾದೇಶದ ಬೌಲರ್ ಕೆಟ್ಟ ಅಂಪೈರಿಂಗ್ ವಿರುದ್ಧ ತನ್ನ ವಿರೋಧ ವ್ಯಕ್ತಪಡಿಸಲು ನಾಲ್ಕು ಬಾಲುಗಳಲ್ಲಿ 92 ರನ್ನುಗಳನ್ನು ಕೊಟ್ಟಿದ್ದಾನೆ. ಅಂಪೈರ್ ವಿರುದ್ಧ ಪ್ರತಿಭಟನೆಗೆ ಬೌಲರ್ ಪದೇ ಪದೇ ಎಕ್ಸಟ್ರಾ ರನ್ನುಗಳನ್ನು ಕೊಡುವ ಬೌಲಿಂಗ್ ಮಾಡಿದ್ದಾನೆ. ಡಾಕಾ ದ್ವಿತೀಯ ದರ್ಜೆ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಈ ಪ್ರಕರಣ ನಡೆದಿದೆ.

ಬೌಲರ್ ಸುಜೋನ್ ಮಹಮೂದ್ ತನ್ನ ನಾಲ್ಕು ಬಾಲುಗಳನ್ನು ಹಾಕಲು 15 ನೋಬಾಲ್‍ಗಳು ಮತ್ತು 13 ವೈಡ್‍ಗಳನ್ನು ಕೊಟ್ಟಿದ್ದಾನೆ. ಅವುಗಳು ಪ್ರತಿಯೊಂದೂ ಫೋರ್ ಹೊಡೆತಕ್ಕೆ ಹೋಗುವಂತೆಯೇ ಬೌಲಿಂಗ್ ಮಾಡಿದ್ದ. ಹೀಗಾಗಿ 32 ಬಾಲ್‍ಗಳಿದ್ದ ಓವರಿನಲ್ಲಿ ಪಂದ್ಯವನ್ನು ವಿರೋಧಿ ತಂಡವು 0.4 ಓವರ್‍ಗಳಲ್ಲಿ 92 ರನ್ನುಗಳನ್ನು ಹೊಡೆದು ಗೆದ್ದುಕೊಂಡಿತು.