ಬ್ಯಾನರು ತೆಗೆಯುವಲ್ಲಿ ಕಿಲ್ಪಾಡಿ ಪಂಚಾಯತ್ ತಾರತಮ್ಯ ; ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಕಿಲ್ಪಾಡಿ ಪಂಚಾಯತಿಯಲ್ಲಿ ಸರಕಾರದ ಆದೇಶದಂತೆ ಪ್ಲಾಸ್ಟಿಕ್ ಬ್ಯಾನರನ್ನು ತೆಗೆಯಲಾಗುತ್ತಿದ್ದು, ಪಂಚಾಯತಿ ಪಾರದರ್ಶಕ ನೀತಿ ಅನುಸರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಂಚಾಯತಿ ವ್ಯಾಪ್ತಿಯಲ್ಲಿ ಕುಮಾರಮಂಗಿಲ ಎಂಬಲ್ಲಿರುವ ದೇವಸ್ಥಾನದಲ್ಲಿ ಮುಂಬರುವ ದಿನಗಳಲ್ಲಿ ಷಷ್ಠಿ ಮಹೋತ್ಸವ ನಡೆಯಲಿದ್ದು, ಅದಕ್ಕಾಗಿ ಬ್ಯಾನರ್ ಆಳವಡಿಸಿದ್ದನ್ನು ಏಕಾಏಕಿ ತೆಗೆಯಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಿಲ್ಪಾಡಿ ಪಂ ಎದುರುಗಡೆಯೇ ಸರಕಾರದ ಜಾಹೀರಾತು ಪ್ಲಾಸ್ಟಿಕ್ ರೂಪದಲ್ಲಿ ಹಾಕಿದ್ದು, ಪಂ ಅಧ್ಯಕ್ಷರು ಅದನ್ನು ಮೊದಲು ತೆಗೆಸಲಿ. ಅದು ಬಿಟ್ಟು ಬ್ಯಾನರ್ ತೆರವು ಕಾರಣ ಮುಂದಿಟ್ಟು, ಸ್ಥಳೀಯರ ಮೇಲೆ ಗದಾಪ್ರಹಾರ ಮಾಡುವ ಪಂಚಾಯತಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.