`ಅನಾವರಣ’ ಪುಸ್ತಕದ 5000 ಪ್ರತಿ ಮಾರಾಟ.

ಗುರುವಾಯನಕೆರೆ : `ಹೆಗ್ಗಡೆ ಸಂಸ್ಥಾನ ಎಷ್ಟು ಸ್ವಚ್ಛ? ಬಿಚ್ಚಿಟ್ಟ ಸತ್ಯ – ಅನಾವರಣ’ ಎನ್ನುವ ಪುಸ್ತಕಕ್ಕೆ ಭಾರೀ ಬೇಡಿಕೆ ಇದ್ದು, 5000 ಪ್ರತಿಗಳೂ ಖಾಲಿಯಾಗಿವೆ. ಇದರ ಸಂಕ್ಷಿಪ್ತರೂಪದ 6 ಪುಟಗಳ 50 ಸಾವಿರ ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ ಎನ್ನುವ ಮಾಹಿತಿಯನ್ನು ನಾಗರಿಕ ಸೇವಾ ಟ್ರಸ್ಟ್ ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ತಿಳಿಸಲಾಗಿದೆ.

 

“ನಾಗರಿಕ ಸೇವಾ ಟ್ರಸ್ಟ್  ಅಧ್ಯಕ್ಷರು ಮತ್ತಿತgರÀ ಮೇಲಿನ ಮಾನಹಾನಿ, ಪೋರ್ಜರಿ ಸಹಿ ಮತ್ತು ಎಸ್‍ಎಂಎಸ್ – ಈ 3 ಕೇಸುಗಳನ್ನು ಕೋರ್ಟ್ ವಜಾ ಮಾಡಿದೆ. ವೀರೇಂದ್ರ ಹೆಗ್ಗಡೆ ಮತ್ತು ಅವರ ಸಂಸ್ಥೆ ಮೇಲೆ 3 ಕ್ರಿಮಿನಲ್ ಖಾಸಗಿ ದೂರು ಕೋರ್ಟಿನಲ್ಲಿ ದಾಖಲಾಗಿದ್ದು, ಒಂದರ ವಿಚಾರಣೆ ಆಗುತ್ತಿದೆ. ಇನ್ನೂ ಕೆಲವು ಕೇಸ್ ದಾಖಲಿಸಲು ರಂಜನ್ ರಾವ್ ಸಿದ್ಧತೆ ಮಾಡಿದ್ದಾರೆ. ಹೆಗ್ಗಡೆ ಕುಟುಂಬ, ಸಂಸ್ಥೆಗಳ ಭೂ ಅವ್ಯವಹಾರದ 15 ಪ್ರಕರಣಗಳು ಪುತ್ತೂರು ಮತ್ತು ಮೈಸೂರು ಎಸಿ ಕೋರ್ಟಿನಲ್ಲಿಯೂ, 4 ಪ್ರಕರಣಗಳು ಡಿಸಿ ಕೋರ್ಟಿನಲ್ಲಿಯೂ ತನಿಖೆಯಾಗುತ್ತಿದೆ. ಇನ್ನೂ 14 ಕೇಸ್ ದಾಖಲಾಗಲಿದೆ. ಸೌಜನ್ಯಾ ಕೊಲೆ ಮರುತನಿಖೆ ಮಾಡಲು ಸಿಬಿಐಗೆ ಆದೇಶವಾಗಿದೆ” ಎನ್ನುವ ವಿವರವನ್ನೂ ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ನೀಡಲಾಗಿದೆ.

ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನವನ್ನು ಈಗಿನ ಧಾರ್ಮಿಕದತ್ತಿ ಕಾಯ್ದೆಯ ನಿಯಮಗಳ ಪ್ರಕಾರ ಧಾರ್ಮಿಕದತ್ತಿ ಇಲಾಖಾ ವ್ಯಾಪ್ತಿಗೆ ತರಲು ಮುಜರಾಯಿ ಸಚಿವರು ನಿರ್ದೇಶಿಸಿದ್ದರೂ ಧಾರ್ಮಿಕ ದತ್ತಿ ಆಯುಕ್ತರು, ಜಿಲ್ಲಾಧಿಕಾರಿಗಳು ಈವರೆಗೆ ಕ್ರಮಕೈಗೊಳ್ಳದಿರುವುದರಿಂದ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಲು ಕ್ರಮ ಕೈಗೊಳ್ಳಲಾಯಿತು. ದ ಕ ಮತ್ತು ಉಡುಪಿ ಜಿಲ್ಲೆಯ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರುಗಳನ್ನು ಸಂಪರ್ಕಿಸುವ ಅಭಿಯಾನ ಆರಂಭಿಸಲು ನಿರ್ಧರಿಸಿ ಜವಾಬ್ದಾರಿಯನ್ನು ಹಂಚಲಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಾರದ ಜವಾಬ್ದಾರಿಯನ್ನು ಈ ಸಭೆಯಲ್ಲಿ ನಿಗದಿ ಮಾಡಲಾಯಿತು.

ಪ್ರಧಾನ ಸಂಚಾಲಕ ಕೆ ಸೋಮನಾಥ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಜಯಪ್ರಕಾಶ್ ಭಟ್ ಸಿಎಚ್ ಸ್ವಾಗತಿಸಿದರು. ಸಂಚಾಲಕ ಬಾಲಕೃಷ್ಣ ಮಲೆಕುಡಿಯ ವಂದಿಸಿದರು. 13 ಸಂಚಾಲಕರು ಭಾಗವಹಿಸಿದ್ದರು.