ಹಿಂದೂ ರಕ್ತದ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ

ಅನಂತಕುಮಾರ

ನಮ್ಮ ಪ್ರತಿನಿಧಿ ವರದಿ

ಕುಮಟಾ : “ಹಿಂದೂ ರಕ್ತದ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇವೆಯೇ ಹೊರತು ಮೂಲತಃ ರಾಜಕಾರಣಿಯಾಗಿ ಅಲ್ಲ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಒಂದೇ ಧ್ವಜ ಹಾರಿಸಬೇಕಾಗಿದೆ. ರಾಜಕೀಯ ವ್ಯತ್ಯಾಸವನ್ನು ಬಿಟ್ಟು ದೇಶಕ್ಕೋಸ್ಕರ ಪ್ರತಿಯೊಬ್ಬ ಕಾರ್ಯಕರ್ತನೂ ಯೋಚಿಸಬೇಕು. ಕಾಂಗ್ರೆಸ್ಸಿಗೆ ಹಲವು ವರ್ಷ ಸ್ಪಷ್ಟ ಬಹುಮತ ನೀಡಿದ್ದರೂ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಕೆಲಸ ಮಾಡಲಿಲ್ಲ. ಆದರೆ ಈಗ ಪ್ರತೀ ಕ್ಷಣವೂ ಕೇಂದ್ರ ಸರ್ಕಾರ ಅಭಿವೃದ್ಧಿ ಪಥದಲ್ಲಿ ದೇಶವನ್ನು ಕೊಂಡೊಯ್ಯುತ್ತಿದೆ” ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಅವರು ಮಂಗಳವಾರ ತಾಲೂಕಿನ ಧಾರೇಶ್ವರದ ಧಾರಾನಾಥ ಸಭಾಭವನದಲ್ಲಿ ದೇವಗಿರಿ, ಕಲಭಾಗ ಮತ್ತು ಹಿರೇಗುತ್ತಿಯ ಗ್ರಾಮಗಳ ವ್ಯಾಪ್ತಿಯ ನೂರಾರು ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿ ಮಾತನಾಡಿ, `ಪ್ರಜಾಪ್ರಭುತ್ವಕ್ಕಿಂತ ಒಳ್ಳೆಯ ವ್ಯವಸ್ಥೆಯನ್ನು ಮತ್ತೆಲ್ಲಿಯೂ ಕಾಣಲು ಸಾಧ್ಯವಾಗುವದಿಲ್ಲ. ಜನರೂ ಈಗ ಪ್ರಜ್ಞಾವಂತರಾಗಿದ್ದು, ಪ್ರತಿಯೊಂದಕ್ಕೂ ರಾಜಕೀಯ ವ್ಯಕ್ತಿಗಳು ಉತ್ತರಿಸಬೇಕಾಗಿದೆ. ಕುಮಟಾ ಕ್ಷೇತ್ರದಲ್ಲಿ ಎಲ್ಲರೂ ಒಗ್ಗೂಡಿ ಬಿಜೆಪಿ ಪರ ಕೆಲಸ ಮಾಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಬೇಕು” ಎಂದರು.

LEAVE A REPLY