ಅನಂತಕುಮಾರ ಹೇಡಿ ರಾಜಕಾರಣಿ : ಮಂಕಾಳ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಜಿಲ್ಲೆಗೆ 5 ಬಾರಿ ಸಂಸದರಾಗಿ ಇದೀಗ ಕೇಂದ್ರ ಸಚಿವರಾಗಿರುವ ಅನಂತಕುಮಾರ ಹೆಗಡೆಯನ್ನು `ಪೊಕ್ಕು (ಹೇಡಿ) ರಾಜಕಾರಣಿ’ ಎಂದು ಭಟ್ಕಳದ ಸಾವಿರ ಕೋಟಿ ಅನುದಾನದ ವೀರ ಮಂಕಾಳ ವೈದ್ಯ ಜರಿದಿದ್ದಾರೆ.

ಸಾವಿರ ಕೋಟಿ ರೂ ಅನುದಾನದ ವಿಷಯ ವಿವಾದವಾದ ಬಗ್ಗೆ ಅನಂತಕುಮಾರ ವಿರುದ್ಧ ಗುಡುಗಿದ ಶಾಸಕ ವೈದ್ಯ, “ಹೆಸರಿಗೆ ಮಾತ್ರ ಸಂಸದರಾಗಿದ್ದು ಬಿಟ್ಟರೆ ಜಿಲ್ಲೆಗೆ ಯಾವುದೇ ಅನುದಾನ ತಂದಿಲ್ಲ. ಅನಂತಕುಮಾರ ಒಬ್ಬ ಪೊಕ್ಕು ಭಾಷಣಕಾರ. ಅಷ್ಟಕ್ಕೂ ಅವರ ಸಾಧನೆ ಏನಾದರೂ ಇದ್ದರೆ ಎಲ್ಲರ ಮುಂದೆ ಬಿಡುಗಡೆ ಮಾಡಲಿ. ವೇದಿಕೆಯಲ್ಲಿ ಭಾಷಣ ಮಾಡಿದಂತೆ ಕ್ಷೇತ್ರದ ಕೆಲಸ ಮಾಡುವುದು ಸರಳವಲ್ಲ” ಎಂದರು.

“ಅನಂತಕುಮಾರ ಹೆಗಡೆ ಜಿಲ್ಲೆಯ ಅಭಿವೃದ್ಧಿಗೆ ಏನೂ ಪ್ರಯತ್ನಪಟ್ಟಿಲ್ಲ. ಅವರ ಸಾಧನೆ ಏನಿದ್ದರೂ ವೇದಿಕೆಯಲ್ಲಿ ಭಾಷಣ ಮಾಡಿದ್ದು ಮಾತ್ರ” ಎಂದು  ಹೇಳಿದರು. ಬುಧವಾರದಂದು ತಾಲೂಕಿನ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 

 

LEAVE A REPLY