ರಾಷ್ಟ್ರೀಯತೆ ಜಪ ಮಾಡುತ್ತಿರುವ ಸಿದ್ದು , ರಾಹುಲ್ : ಅನಂತ ಹೆಗಡೆ

ಕರಾವಳಿ ಅಲೆ ವರದಿ

ಶಿರಸಿ : “ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ರಾಹುಲ್ ಗಾಂಧಿಗಳು ರಾಷ್ಟ್ರೀಯತೆ ಜಪ ಮಾಡುತ್ತಿದ್ದಾರೆ. ಖೋಟಾ ರಾಷ್ಟ್ರೀಯತೆ ಎನ್ನಿಸಿದರೂ ಬೇಜಾರಿಲ್ಲ. ಕನಿಷ್ಠ ಗೌರವ ನೀಡುವ ಕಾರ್ಯ ಮಾಡುತ್ತಿದ್ದಾರೆ. ರಕ್ತದ ಪರಿಚಯ ಇಲ್ಲದವರಿಗೂ ರಕ್ತದ ಪರಿಚಯ ಆಗುತ್ತಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಮನರಂಜನೆ ನೀಡಲು ಬರುತ್ತಿದ್ದಾರೆ” ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.

ಅವರು ಶಿರಸಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ರಾಷ್ಟ್ರೀಯತೆ ಮರತುಹೋಗುವ ಸಂದರ್ಭದಲ್ಲಿ ಕೋಟಾ ಹಿಂದುತ್ವದ ಮೂಲಕ ಸಿದ್ದರಾಮಯ್ಯನವರಿಗೆ, ರಾಹುಲ್ ಗಾಂಧಿಗೆ ಹಿಂದೂತ್ವದ ನೆನಪಾಗಿದೆ. ಇದಕ್ಕೆ ಕಾರ್ಯಕರ್ತರಿಗೆ ಹಾಗೂ ಅವರಿಗೆ ಅಭಿನಂದಿಸುತ್ತೇನೆ. ಕೇವಲ ಬಾಯಲ್ಲಿ ಹೇಳಿದರೆ ಸಾಲದು, ಆಚರಣೆಗೂ ತರಬೇಕು. ಆಗ ಆ ರಕ್ತಕ್ಕೆ ಬೆಲೆ ಕೊಟ್ಟಂತಾಗುವುದು. ರಾಹುಲ್ ಗಾಂಧಿ ಯಾರು ಎಂಬುದಕ್ಕೆ ಅವರ ರಕ್ತವನ್ನು ಸಿದ್ದರಾಮಯ್ಯ ಪರೀಕ್ಷೆ ಮಾಡಿ ಹೇಳಬೇಕು, ರಾಹುಲ್ ಗಾಂಧಿ ಕರ್ನಾಟಕದಲ್ಲಿ ಓಡಾಡಿದಷ್ಟೂ ಒಳ್ಳೆಯದು, ಜನರಿಗೆ ಒಳ್ಳೆಯ ಮನರಂಜನೆ ಸಿಗಲಿದೆ. ಜನರು ಕೂಡ ಮನರಂಜನೆ ಇಷ್ಟಪಡುತ್ತಾರೆ. ಕರ್ನಾಟಕದಲ್ಲಿ ಓಡಾಡುವುದರಿಂದ ಬಿಜೆಪಿ ಇನ್ನಷ್ಟು ಬಲಿಷ್ಠವಾಗಲಿದೆ” ಎಂದರು.

“ತಾಳಗುಪ್ಪ-ಸಿದ್ದಾಪುರ ರೈಲು ಯೋಜನೆ ತರಲು ವಿಶೇಷ ಪ್ರಯತ್ನ ಮುಂದುವರಿಸಿದ್ದೇವೆ. ಮುಂದೆ ಶಿರಸಿಗೂ ತರುತ್ತೇವೆ. ದಾಂಡೇಲಿ-ಅಳ್ಳಾವರ, ಶಿರಸಿ-ಹಾವೇರಿ ಯೋಜನೆ ಸಹ ತರಲಿದ್ದೇವೆÉ. ಕಾರವಾರ-ಗೋವಾ ನಡುವೆ ರೈಲು ಮಾರ್ಗ ಹೆಚ್ಚಿಸಲಿದ್ದೇವೆ. ಅಮೃತ ಯೋಜನೆಯ ನಿಯಮಗಳು ಬಿಗು ಇದ್ದು, ಜಿಲ್ಲಾ ಕೇಂದ್ರ ಕಾರವಾರವಾದರೂ, ವ್ಯವಹಾರಿಕ ಜಿಲ್ಲಾ ಕೇಂದ್ರ ಶಿರಸಿ ಆಗಿರುವುದರಿಂದ ಎರಡು ಕಡೆಗೂ ಯೋಜನೆ ತರಲು ಪ್ರಯತ್ನ ನಡೆಸಿದ್ದೇನೆ” ಎಂದರು.

 

LEAVE A REPLY