`ಮುಗುಳುನಗೆ’ಯಲ್ಲಿ ಅನಂತ ನಾಗ್ ಡಾಕ್ಟರ್

ಯೋಗರಾಜ್ ಭಟ್ಟರಿಗೆ ಗಣೇಶ್ ಹೇಗೆ ಪ್ರಿಯ ನಟನೋ ಹಾಗೇ ಅನಂತನಾಗ್ ಬಗ್ಗೆಯೂ ಅವರಿಗೆ ಸ್ಪೆಷಲ್ ಒಲವು. ಅವರ ಹೆಚ್ಚಿನ ಚಿತ್ರದಲ್ಲಿ ಅನಂತ ನಾಗ್ ನಟಿಸಿದ್ದಾರೆ. `ಮುಂಗಾರು ಮಳೆ’, `ಗಾಳಿಪಟ’ ಚಿತ್ರದಲ್ಲೂ ಅನಂತ್ ನಟಿಸಿದ್ದರು. ಸದ್ಯ ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್ನಿನಲ್ಲಿ ಬರುತ್ತಿರುವ `ಮುಗುಳುನಗೆ’ ಸಿನಿಮಾದಲ್ಲಿ ಕೂಡಾ ಅನಂತ ನಾಗ್ ಅವರಿಗೆ ಒಂದು ಪ್ರಮುಖ ಪಾತ್ರವಿದೆಯಂತೆ.

ಸಿನಿಮಾದಲ್ಲಿ ಅನಂತ ನಾಗ್ ಡಾಕ್ಟರ್. ಗಣೇಶನ ಫ್ಯಾಮಿಲಿ ಡಾಕ್ಟರ್ ಆಗಿ ಸ್ಟೆತೋಸ್ಕೋಪ್, ಬಿಳಿ ಕೋಟ್ ಧರಿಸಿ ಡಾಕ್ಟರ್ ಗೆಟಪ್ಪಿನಲ್ಲಿ ಅನಂತ ನಾಗ್ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಅವರ ಹಾಸ್ಯಭರಿತ ಸಂಭಾಷಣೆ ಜನರನ್ನು ನಗುಗಡಲಲ್ಲಿ ತೇಲಿಸಲಿದೆ ಎನ್ನುತ್ತಾರೆ ಚಿತ್ರತಂಡದವರು. `ಮುಗುಳು ನಗೆ’ಯ ಹಚ್ಚಿನ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಗಣೇಶನ ಜೊತೆ ಭಾವನಾ ನಿಕಿತಾ ನಾರಾಯಣ್ ಮೊದಲಾದವರು ನಟಿಸುತ್ತಿದ್ದಾರೆ.