ಮುಗಿಯದ ಕಥೆ

ದಕ್ಷಿಣ ಕನ್ನಡ ಯಾಕೆ ಇಡೀ ಕರ್ನಾಟಕ ವಿದೇಶಗಳಲ್ಲೂ ಬಿ ಸಿ ರೋಡಿನ ಕೋಮುಗಲಭೆಯ ಮಾರ್ದನಿ ಹಬ್ಬಿದೆ ಎಲ್ಲರೂ ಕೇಳುವ ಒಂದು ಮಾತು ಇದು ಮುಗಿಯದ ಕತೆಯಾ  ಮಂಗಳೂರಿನ ಬಗ್ಗೆ ಹೆಮ್ಮೆ ಇಟ್ಟುಕೊಂಡವರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಇದರಿಂದ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಬಹಳ ಹೊಡೆತ ಬಿದ್ದಿದೆ ದಿನಾ ಬೆಳಗಾದರೆ ಯಾವ ಟೀವಿ ಚಾನೆಲ್ ನೋಡಿ ಪತ್ರಿಕೆಗಳನ್ನು ನೋಡಿ ಈ ಎರಡು ಪಕ್ಷಗಳ ಪರ ವಿರೋಧ ಅಲ್ಲದೇ ಬೇರೆನೂ ಇಲ್ಲ ರಾಜಕೀಯದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹ ದ್ವೇಷದ ಅಲೆ ಎಬ್ಬಿಸುವುದು ಮಾತ್ರ ಸತ್ಯ  ಮತ್ತೆ ಕುರಿಗಳಾಗುವುದು ದ ಕ ಜಿಲ್ಲೆಯ ಜನ ಮಾತ್ರ  ಇದು ಮಾತ್ರ ಮುಗಿಯದ ಕಥೆ ಇನ್ನಾದರೂ ಬುದ್ಧಿವಂತರು ಎಚ್ಚತ್ತುಕೊಳ್ಳಲಿ

  • ಚಿಂತನ್  ಪುತ್ತೂರು